ಕನ್ನಡ ಸಿನಿಲೋಕ ಸ್ಥಬ್ಧವಾಗಿದೆ ಎಂಬ ಮೌನಗಾನ ಕೇಳುತ್ತಿದ್ದಾಗಲೇ ಅತ್ತ ಕರಾವಳಿ ತೀರದಲ್ಲಿ ಸಿನಿಮಾವೊಂದು ಸಿದ್ಧವಾಗಿದೆ. ಸೂಪರ್ ಸ್ಟಾರ್‌ಗಳ ಸ್ಥಾನಗಳನ್ನು ಹೊಸ ಪ್ರತಿಭೆಗಳು ತುಂಬಿದ್ದು ಈ ಸಿನಿಮಾ ಬಗ್ಗೆಯೇ ಈಗ ಎಲ್ಲೆಲ್ಲೂ ಚರ್ಚೆ.
ಅಂದ ಹಾಗೆ ಈ ಚಿತ್ರದ ಹೆಸರು ‘ಭಟ್ಕಳ್ To ಭಟ್ಕಳ್’
‘ಬಣ್ಣ ಬಣ್ಣದ ಲೋಕ’ ಸಿನಿಮಾದ ನಿರ್ದೇಶಕ ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದದಲ್ಲಿ ‘ಭಟ್ಕಳ್..’ ಸಿದ್ಧಗೊಂಡಿದೆ.
ಲಾಕ್’ಡೌನ್ ತೆರವಾಗುತ್ತಿದ್ದಂತೆಯೇ 4ನೇ ಚಿತ್ರಕ್ಕೆ ಮುನ್ನುಡಿ ಬರೆದ ಇಸ್ಮಾಯಿಲ್, ‘ಭಟ್ಕಳ್..’ನಲ್ಲಿ ಹೊಸ ನಟಿ ನಟಿಯರನ್ನು ಸ್ಯಾಂಡಲ್‌ವುಡ್’ಗೆ ಪರಿಚಯಿಸಿದ್ದಾರೆ.
ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಚಿತ್ರಕತೆ ಇದೆ. ಪ್ರತಿಯೊಂದು ದ್ರಶ್ಯಗಳು ಕೂಡ ಅದ್ಭುತವಾಗಿ ಮಾತನಾಡುತ್ತವೆ. ಬಹಳಷ್ಟು ಹೊಸ ಪ್ರತಿಭೆಗಳು ಈ ಚಿತ್ರದ ಮೂಲಕ ಬೆಳಕಿಗೆ ಬರುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಇಸ್ಮಾಯಿಲ್ ಮೂಡುಶೆಡ್ಡೆ.
ಉದಯ ನ್ಯೂಸ್ ಜೊತೆ ಈ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡ ಇಸ್ಮಾಯಿಲ್, ಹಿರಿಯ ರಂಗಭೂಮಿ ಹಾಗೂ ಚಿತ್ರನಟ ಚಂದ್ರಹಾಸ ಉಳ್ಳಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಬರೆದ ಕತೆಗೆ ಇವರು ತಮ್ಮ ಪಾತ್ರದ ಮೂಲಕ ಜೀವ ತುಂಬಿದ್ದಾರೆ ಎಂದರು.
ನಾಯಕ ನಟನಾಗಿ ಪ್ರಜ್ಞೆಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಈ ಹುಡುಗ ಕನಸು ಮಾರಾಟಕ್ಕಿದೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಹೊಸಮುಖ ಮಲೆನಾಡ ಹುಡುಗಿ ಜಾಸ್ಮಿನ್ ಗೋಮ್ಸ್ ಕಾಣಿಸಿಕೊಂಡಿದ್ದಾರೆ. ಉಡುಪಿ ಮೂಲದ ಮೊಡಲಿಂಗ್ ಕಾವ್ಯ ಅಂಚನ್ ಕೂಡ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದಾರೆ
ಲಕ್ಶ್ಮಣ್ ಕುಮಾರ್ ಮಳ್ಳೂರು, ತಿಮ್ಮಪ್ಪ ಕುಲಾಲ್, ಪ್ರಾಣ್ ಶೆಟ್ಟಿ, ರೂಪ ವರ್ಕಾಡಿ, ಸುಜಾತ ಶಕ್ತಿನಗರ, ರೊನ್ಸ್ ಲಂಡನ್, ಮಾ.ದನ್ವಿತ್ ಸುವರ್ಣ, ಸುಪ್ರೀತ ಮಣಿಪಾಲ, ಡಾ.ಅಶೋಕ್ ಕುಮಾರ್, ಹರೀಶ್ ಬಂಗೇರ, ಆಕ್ಷತ್ ವಿಟ್ಲ, ನವೀನ್ ಬಂಟವಾಲ್, ಅಬೂಬಕ್ಕರ್, ಇಕ್ಬಾಲ್ ಕೈರಂಗಳ, ವಹಾಬ್ ಬೆಂಗ್ರೆ, ರಿಯಾಜ್ ಬೆಂಗ್ರೆ ಸಹಿತ ಪ್ರತಿಭಾವಂತ ಕಲಾವಿದರು ‘ಭಟ್ಕಳ್..’ನ ಪಾತ್ರಗಳಿಗೆ ಜೀವತುಂಬಿದ್ದಾರೆ. ಇವರ ಜೊತೆ ವಕೀಲನಾಗಿ ತಾಾನು ಕಾಣಿಸಿಕೊಂಡಿರಯವುದಾಗಿ ಇಸ್ಮಾಯಿಲ್ ಹೇಳಿಕೊಂಡಿದ್ದಾರೆ.