HAPPY FRIENDSHIP DAY.. ‘ಮಿತ್ರತ್ವ ದಿನದಂದು ಮಂಗಳೂರು-ಮೂಡಬಿದ್ರಿ ಯುವಕರು ಸೊಗಸಾದ ಆಲ್ಬಂ ಸಾಂಗ್‌ನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.
‘ಉಸಿರೇ.. ನಿನಗೂ ಈ ಪ್ರೀತಿಯ ಅರಿವಿಲ್ಲವೇ..?’ ಎನ್ನುತ್ತಲೇ ಯುವ ಮನಸ್ಸುಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಈ ‘ಸನಿಹ’ದ ಸಾಂಗ್..
ಚಿಗುರು ಮೀಸೆಯ ಹುಡುಗರು, ಅವರ ಜೊತೆಗೆ ‘ಮೌನವ ಏಕೋ’ ಎನ್ನುತ್ತಾ ಹಾಡಿನುದ್ದಕ್ಕೂ ಚೆಲುವೆಯರು ಇದರಲ್ಲಿ ಸೊಗಸು ತುಂಬಿದ್ದಾರೆ. ವೀಕ್ಷಕರ ಎದೆಯ ಏರಿಳಿತ ಹೆಚ್ಚಿಸುವ ಸೊಗಸಾದ ಹಾಡು, ವಿಡಿಯೋ ಮುಗಿಯವವರೆಗೂ ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತಿದೆ.
ರಕ್ಷಿತ್ ಪೂಜಾರಿಯ ಸಾಹಿತ್ಯಕ್ಕೆ ವಿಜಯಶ್ರೀ ಮೂಲ್ಯ ಅವರು ತಮ್ಮ ಕಂಠಸಿರಿ ಮೂಲಕ ಹಾಡಿನ ಇಂಪು ತುಂಬಿದ್ದಾರೆ. ಪ್ರಸಾದ್ ಪೂಜಾರಿ ಹಾಗೂ ತೇಜಸ್ವಿನಿ ಪೂಜಾರಿ ಈ ಆಲ್ಬಂ ಸಾಂಗ್ ಪೂರ್ತಿ ತಾರೆಯರಾಗಿ ಆಕರ್ಷಣೆ ತಂದಿದ್ದಾರೆ.
ಪ್ರಸಾದ್ ಅಭಿಷೇಕ್ ರಾವ್ ಇದರ ಸಂಕಲನ ಪ್ರವೀಣರಾದರೆ, ಇದರ ಕ್ರಿಯಾಶೀಲ ಕಾಣಿಕೆಯಲ್ಲಿ ರಕ್ಷಿತ್ ಪೂಜಾರಿ, ನಿರೀಕ್ಷಣ್ ಅಮೀನ್, ರಕ್ಷಿತ್ ಪೂಜಾರಿ, ಸೌಮ್ಯ ಆಚಾರ್ಯ, ಶ್ರೀನಾಥ್ ಮೂಡಬಿದ್ರಿ, ಅವಿನಾಶ್ ನಾತು, ಆಶ್ ಕ್ರಯೇಶನ್ ಪ್ರಯತ್ನವೂ ಇದೆ. DOPಯು ಅಶೋಕ್ ಆಂಚನ್ ಹಾಗೂ ನವೀನ್ ಜಿ ಪೂಜಾರಿ ಅವರದ್ದು.