ಮಂಗಳೂರು: ಶ್ರಾವಣ ಶುಕ್ಲ ಪೂರ್ಣಿಮೆಯ ಸಂಭ್ರಮದಲ್ಲಿ ಮಂಗಳೂರು ಸಮುದ್ರ ತಡಿಯಲ್ಲಿ ನಡೆದ ‘ಸಮುದ್ರ ಪೂಜೆ’ ಕೈಂಕರ್ಯ ಭಕ್ತಿ ಭಾವದ ವಾತಾವರಣ ನಿರ್ಮಿಸಿತು. ನೂಲ ಹುಣ್ಣಿಮೆ, ರಕ್ಷಾಬಂಧನದೊಂದಿಗೆ ಸಮುದ್ರ ಪೂಜೆಯೂ ಕರಾವಳಿ ಜನರಿಗೆ ವಿಶೇಷ ಆಕರ್ಷಣೆಯಾಗಿದೆ.
ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದ ವತಿಯಿಂದ ಭಾನುವಾರ ಸಮುದ್ರ ಪೂಜೆ ನೆರವೇರಿತು. ಶ್ರೀದೇವಳ ಹಾಗೂ ಸಮಾಜಭಾಂದವರಿಂದ ‘ಸ್ವರ್ಣ ತೆಂಗು’ ಹಾಗೂ ‘ಕ್ಷೀರ ಸಮರ್ಪಣೆ’ ನಡೆಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಮೊಕ್ತೇಸರರು, ಧಾರ್ಮಿಕ ಮುಖಂಡರು ಹಾಗೂ ಸಮಾಜದ ಗಣ್ಯರು ಪಾಲ್ಗೊಂಡು ಭಕ್ತರೊಂದಿಗೆ ಪೂಜಾ ವಿಧಿಯಲ್ಲಿ ಭಾಗಿಯಾದರು.