ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಸಂಕಷ್ಟದಲ್ಲಿರುವ ಬೆಂಗಳೂರಿನ ಜನರ ನೆರವಿಗೆ ಧಾವಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಹೆಬ್ಬಾಳ
ಸದಾ ಸ್ಮಿತಾ ಫೌಂಡೇಶನ್ ಹಾಗೂ ವೈಎಎನ್ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಹೆಬ್ಬಾಳ ಕ್ಷೇತ್ರದ ನಾಗರಿಕ ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ಹಾಗೂ ಇಸೋಲೇಶನ್ ಕಿಟ್ ಗಳ ವಿತರಣೆಗೆ ಅವರು ಕಾರ್ಯಕ್ರಮ ಆರಂಭಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಆರೋಜಿಸಿದ ಕಾರ್ಯಕ್ರಮ ಗಮನಸೆಳೆಯಿತು.
ಈ ವೇಳೆ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡಗಳಲ್ಲಿ ಔಷಧಿ ಸಿಂಪಡಿಸುವ ವಾಹನಗಳ ಕಾರ್ಯಾಚರಣೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿವಿ ಸದಾನಂದ ಗೌಡರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ಹಾಗೂ ಹೆಬ್ಬಾಳ ಮಂಡಲದ ಅಧ್ಯಕ್ಷ ರಿಷಿಕುಮಾರ್, ಮಾಜಿ ನಗರಪಾಲಿಕೆ ಸದಸ್ಯರು, ವಾರ್ಡ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.