ದೆಹಲಿ: ದೆಹಲಿ: ಆರೆಸ್ಸೆಸ್ ಸಂಘಟನೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರು ತಾಲಿಬಾನ್‌ಗೆ ಹೋಲಿಸಿದ್ದು, ಈ ವಿಚಾರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೈ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸಂಚಲನ ಸೃಷ್ಟಿಸಿದ್ದಾರೆ.
ಆರೆಸ್ಸೆಸ್ ಎಂದರೇನು ಎಂಬ ಬಗ್ಗೆ ತಿಳಿಯಲು ಸಂಘದ ಶಾಖೆಗೆ ಬನ್ನಿ ಎಂಬ ಸಿ.ಟಿ.ರವಿ ಕರೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅದಾಗಲೇ ಸಾಮಾಜಿಕ ಜಾಲತಣಗಳಲ್ಲಿ ಹರಿದಾಡಿರುವ ಹಳೇಯ ಪೋಸ್ಟೊಂದಕ್ಕೆ ಮರು ಜೀವ ಸಿಕ್ಕಿದರೆ, ಮತ್ತೊಂದೆಡೆ ಪ್ರಣಬ್ ಮುಖರ್ಜಿ ಚರಿತ್ರೆ ಕೂಡಾ ಮುನ್ನಲೆಗೆ ಬಂದಿದೆ. ಅಷ್ಟರಲ್ಲೇ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯೂ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹುಕಾಲದ ಹಿಂದೆಯೇ ಹಾಕಲಾಗಿದ್ದ ಪೋಸ್ಟ್ ಮುನ್ನಲೆಗೆ ಬಂದಿದೆ. ಕಾಂಗ್ರೆಸ್‌ನ ಆದ್ಯ ಪ್ರಮುಖರಲ್ಲಿ ಒಬ್ವರಾಗಿದ್ದ ಜವಾಹರಲಾಲ್ ನೆಹರೂ ಕೂಡಾ ಸಂಘದ ಶಿಭಿರಕ್ಕೆ ಭೇಟಿ ನೀಡಿದ್ದರೆನ್ನಲಾದ ಫೊಟೋ ಅದಾಗಿದೆ.
https://twitter.com/amitmrai97/status/398148177498345472?ref_src=twsrc%5Etfw%7Ctwcamp%5Etweetembed%7Ctwterm%5E398148177498345472%7Ctwgr%5E%7Ctwcon%5Es1_&ref_url=https%3A%2F%2Fd-35907337682324945459.ampproject.net%2F2109102127000%2Fframe.html
ಈ ನಡುವೆ, ಈ ವರೆಗೂ ಬಿಜೆಪಿ, ಆರೆಸ್ಸೆಸ್ಸನ್ನು ಟೀಕಿಸುತ್ತಿದ್ದ ಕಾಂಗ್ರೆಸ್‌ನ ಪ್ರಭಾವಿ ನಾಯಕ ದಿಗ್ವಿಜಯ್ ಸಿಂಗ್ ಕೂಡಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವೈಖರಿ ಗಮನಸೆಳೆದಿದೆ.
ಭೋಪಾಲ್‌ನಲ್ಲಿ ದಿಗ್ವಿಜಯ್ ಸಿಂಗ್ ಅವರು ನೀಡಿದ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ. ಬಿಜೆಪಿ, ಆರೆಸ್ಸೆಸ್ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ದಿಗ್ವಿಜಯ್ ಸಿಂಗ್ ಹಾಡಿ ಹೊಗಳಿದ್ದಾರೆ. 2017ರಲ್ಲಿ ಆರು ತಿಂಗಳ ಕಾಲ ನರಸಿಂಗಪುರ್‌ನ ಬರ್ಮನ್ ಘಾಟ್‌ನಿಂದ 3 ಸಾವಿರ ಕಿಲೋ ಮೀಟರ್ ದೂರ ತಾವು, ತಮ್ಮ ಪತ್ನಿ ಅಮೃತಾ ಪಾದಯಾತ್ರೆ ಕೈಗೊಂಡಾಗ ಅಮಿತ್ ಶಾ ಹಾಗೂ ಆರೆಸ್ಸೆಸ್ ಕಾರ್ಯಕರ್ತರು ಬಗೆಬಗೆಯಲ್ಲಿ ನೆರವಾಗಿದ್ದರು. ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಬೆನ್ನಿಗೆ ನಿಂತಿದ್ದರು ಎಂದು ಕೃತಜ್ಞತಾ ಭಾವದಿಂದ ಹೇಳಿಕೊಂಡಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆಯು ಆರೆಸ್ಸೆಸ್‌ನ್ನು ಟೀಕಿಸುತ್ತಿರುವ ಕೈ ನಾಯಕರನ್ನು ಮುಜುಗರಕ್ಕೀಡುಮಾಡಿದೆ.