ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಸೌಜನ್ಯ (ಸವಿ ಮಾದಪ್ಪ) ಸಾವಿನ ಪ್ರಕರಣ ಸ್ಯಾಂಡಲ್‌ವುಡ್‌ನಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ. ನಟಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡೆತ್ ನೋಟ್ ರೀತಿಯ ಪತ್ರವೂ ಸಿಕ್ಕಿದೆ. ಈ ಬಗ್ಗೆ ಪರಿಶೀಲಿಸಿರುವ ಪೊಲೀಸರು ನಟಿಯು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಿಕೊಂಡರೂ ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ.
ಈ ನಡುವೆ, ಸವಿ ಮಾದಪ್ಪ ತಂದೆ ಕುಂಬಳಗೋಡು ಠಾಣೆಗೆ ನೀಡಿರುವ ದೂರು ಈ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದೆ. ನಟ ಹಾಗೂ ಮತ್ತೊಬ್ಬ ವ್ಯಕ್ತಿ ತನ್ನ ಮಗಳ ಸಾವಿಗೆ ಕಾರಣ ಎಂದು ನಟಿ ಸವಿ ತಂದೆ ಪ್ರಭು ಮಾದಪ್ಪ ದೂರಿದ್ದಾರೆ.
ವಿವೇಕ್ ಹಾಗೂ ಮಹೇಶ್ ಎಂಬ ಎರಡು ಹೆಸರುಗಳ ಬಗ್ಗೆ ಸವಿ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ