ಮಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಡ್ಡಿಪಡಿಸಿದರೆ, ಇತ್ತ ದಕ್ಷಿಣಕನ್ನಡದಲ್ಲಿ ಸಂಘ ಸೈನಿಕರ ವಿಜಯೋತ್ಸವ ಸಂಭ್ರಮ ಮನೆಮಾಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಚಟುವಟಿಕೆಯನ್ನು ಆರಂಭಿಸಿ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ಶತಾಬ್ದಿ ಪಥಸಂಚಲನ ನಡೆಯುತ್ತಿದ್ದು, ಭದ್ರಕೋಟೆ ಕರಾವಳಿ ಜಿಲ್ಲೆಯಲ್ಲಿ RSS ಕಾರ್ಯಕರ್ತರು ಶಕ್ತಿ ಪ್ರದರ್ಶನ ನಡೆಸಿದರು.
ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರ್ಯಕರ್ತರ ಪಥಸಂಚಲನ ಗಮನಸೆಳೆಯಿತು. ಅಪಾರ ಸಂಖ್ಯೆಯಲ್ಲಿ ಗಣವೇಷಧಾರಿ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗಿಯಾದರು.
ಸಂಘ ಸೈನಿಕರು ಬಂಟ್ವಾಳದ ಪ್ರಮುಖ ರಸ್ತೆಯಲ್ಲಿ ಪಾಠ ಸಂಚಲನ ನಡೆಸಿದರು. ವಿವಿಧ ವಾಹಿನಿಗಳಲ್ಲಿ ನೂರಾರು ಸ್ವಯಂಸೇವಕರು ಘೋಷ್ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ವೈಖರಿ ಸಂಘ ಶಿಸ್ತಿಗೆ ಸಾಕ್ಷಿಯಾಯಿತು.
ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಗಣವೇಷಧಾರಿ ಕಾರ್ಯಕರ್ತರಿಗೆ ಪುಷ್ಪಾರ್ಚನೆ ಮಾಡಿ ದೇಶಭಕ್ತಿ ಪ್ರದರ್ಶಿಸುತ್ತಿದ್ದ ಸನ್ನಿವೇಶವು ಕುತೂಹಲದ ಕೇಂದ್ರಬಿಂದುವಂತಾಗಿತ್ತು. ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಬಿಜೆಪಿ ನಾಯಕರನೇಕರು ಈ ಪಥಸಂಚಲದಲ್ಲಿ ಭಾಗಿಯಾಗಿದ್ದರು.