ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೆಲವು ಎದುರಾಳಿಗಳು ಟೀಕಿಸುತ್ತಿರುವುದಷ್ಟೇ ಅಲ್ಲ, ಅವರ ಸಾವನ್ನೂ ಬಯಸಿರುವ ಕಳವಳಕಾರಿ ಪ್ರಸಂಗ ನಡೆದಿದೆ.
ಆರ್ಜೆಡಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ತಲೆಗೆ ಗುಂಡು ಹಾರಿಸಬೇಕೆಂದು ಹೇಳಿಕೆ ನೀಡಿದ್ದಾರೆಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ.
ಆರ್.ಜೆ.ಡಿ ನಾಯಕ ಅವಧೇಶ್ ಸಿಂಗ್ ಎಂಬವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತಲೆಗೆ ಗುಂಡು ಹಾರಿಸಿದರೆ ತಪ್ಪೇನು ಎಂದು ಈ ನಾಯಕ ಪ್ರಶ್ನಿಸಿರುವ ವಿಡಿಯೋ ತುಣುಕು ಇದೀಗ ವೈರಲ್ ಆಗಿದೆ.
देखिए Indi गठबंधन की बैठक का एजेंडा.
चार दिन पहले झारखंड के कोडरमा में हुई Indi गठबंधन की बैठक में RJD के नेता अवधेश सिंह यादव मोदी जी की खोपड़ी में गोली मारने की बात कर रहे हैं.
अपनी हार को करीब आते देख ठगबंधन की सभी पार्टियां और उनके नेता अपनी मानसिक संतुलन खो बैठे है.
Indi… pic.twitter.com/1eLtqeE3nw
— Babulal Marandi (Modi Ka Parivar) (@yourBabulal) March 19, 2024
ಬಿಜೆಪಿ ಖಂಡನೆ:
ಈ ವೋಡಿಯೋವನ್ನು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ಬೊಜೆಪಿ, ಇಂಡಿ ಮೈತ್ರಿ ಸಭೆಯ ಅಜೆಂಡಾ ನೋಡಿ. ನಾಲ್ಕು ದಿನಗಳ ಹಿಂದೆ ಜಾರ್ಖಂಡ್ನ ಕೊಡೆರ್ಮಾದಲ್ಲಿ ನಡೆದ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಆರ್ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್ ಅವರು ಮೋದಿಯ ತಲೆಬುರುಡೆಗೆ ಗುಂಡು ಹಾರಿಸುವುದಾಗಿ ಮಾತನಾಡಿದ್ದಾರೆ ಎಂದು ಬೊಟ್ಟು ಮಾಡಿದೆ.
ತಮ್ಮ ಸೋಲು ಹತ್ತಿರವಾಗುತ್ತಿರುವುದನ್ನು ಕಂಡು ತುಗಬಂಧನದ ಎಲ್ಲಾ ಪಕ್ಷಗಳು ಮತ್ತು ಅವರ ನಾಯಕರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ.ಭಾರತೀಯ ಮೈತ್ರಿಕೂಟ ಏನೇ ಷಡ್ಯಂತ್ರ ರೂಪಿಸಿದರೂ ಅವರ 140 ಕೋಟಿ ರೂಪಾಯಿ ಮೌಲ್ಯದ ಕುಟುಂಬ ಮೋದಿಯವರೊಂದಿಗೆ ನಿಂತಿದೆ ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಜಾರ್ಖಂಡ್ ಪೊಲೀಸ್ ಡಿಜಿಪಿ ಇದರ ಬಗ್ಗೆ ಗಮನಹರಿಸಬೇಕು. ಗೌರವಾನ್ವಿತ ಪ್ರಧಾನಿಯವರಿಗೆ ಗುಂಡು ಹಾರಿಸುವುದಾಗಿ ಮಾತನಾಡುತ್ತಿರುವ ಈ ಪಾತಕಿಯನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಿಬೇಕು ಎಂದು ಬಿಜೆಪಿ ಒತ್ತಾಯಿಸಿದೆ.