ಯಾರದೋ ಸಾವು.. ಇನ್ಯಾರಿಗೋ ಸಂತಾಪ.. ಇಂಥದ್ದೊಂದು ಅದಲುಬದಲು ಪ್ರಸಂಗಕ್ಕೆ ಸಾಮಾಜಿಕ ಜಾಲತಾಣಗಳು ಸಾಕ್ಷಿಯಾಗುತ್ತಲೇ ಇವೆ. ಹಿಂದಿ ಬಿಗ್ ಬಾಸ್ ವಿನ್ನರ್, ಕಿರುತೆರೆಯ ನಟ ಸಿದ್ಧಾರ್ಥ್ ಶುಕ್ಲಾ ಅವರ ಸಾವಿನ ಸಂದರ್ಭದಲ್ಲೂ ಇಂಥದ್ದೊಂದು ಎಡವಟ್ಟು ನಡರದಿದೆ.
ಸಿದ್ಧಾರ್ಥ್ ಶುಕ್ಲಾ ಅವರು ಗುರುವಾರ ಹೃದಯಘಾತದಿಂದ ವಿಧಿವಶರಾಗಿದ್ದಾರೆ. ಈ ನಟನ ಸಾವಿಗೆ ಎಲ್ಲೆಡೆ ಸಂತಾಪ ವ್ಯಕ್ತವಾಗಿದೆ. ಇದೇ ವೇಳೆ ವ್ಯಕ್ತಿಯೋರ್ವ ಟ್ವಿಟರ್‌ನಲ್ಲಿ ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಫೊಟೋ ಬದಲಿಗೆ ತಮಿಳು ನಟ ಸಿದ್ಧಾರ್ಥ್ ಅವರ ಫೋಟೊ ಹಾಕಿ RIP ಎಂದು ಸಂತಾಪ ಸೂಚಿಸಿದ್ದಾನೆ. ಸೆನ್‍ಸೆ ಎಕ್ಸ್ ಹೆಸರಿನಲ್ಲಿರುವ ಟ್ವಿಟರ್ ಖಾತೆಯಲ್ಲಿನ ಈ ಪೋಸ್ಟ್ ಗಮನಿಸಿದ ನಟ ಸಿದ್ಧಾರ್ಥ್ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.
https://twitter.com/Actor_Siddharth/status/1433423447783182338
ಈ ಬಗ್ಗೆ ಕಮೆಂಟ್ ಮಾಡಿರುವ ನಟ ಸಿದ್ಧಾರ್ಥ್, ಇದು ಉದ್ದೇಶಿತ ದ್ವೇಷ ಹಾಗೂ ಕಿರುಕುಳ. ಇಂದು ನಾವು ಯಾವ ಮಟ್ಟಕ್ಕೆ ಇಳಿದಿದ್ದೇವೆ ನೋಡಿ ಎಂದಿದ್ದಾರೆ.