ಬೆಂಗಳೂರು: ಕೊರೋನಾ ವೈರಾಣು ಸೋಂಕಿನಿಂದ ಇಡೀ ದೇಶವೇ ತತ್ತರಗೊಂಡಿದೆ. ಈಗಾಗಲೇ ಎರಡನೇ ಅಲೆ ಮಾರಣಹೋಮವನ್ನೇ ನಡೆಸುತ್ತಿದೆ. ಆದರೂ ಬೆಂಗಳೂರಿನ ಹಲವೆಡೆ ಜನ ಕ್ಯಾರೇ ಅನ್ನುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತಿದೆ ಉದ್ಯಾನ ನಗರಿಯ ರಿಚಸ್ ಪಾರ್ಕ್.
ಪ್ರಸ್ತುತ ಲಾಕ್‌ಡೌನ್ ಕಠಿಣ ನಿಯಮ ಜಾರಿಯಲ್ಲಿದೆ. ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವಿದೆ. ಪಾರ್ಕ್‌ಗಳು ಬಂದ್ ಎಂಬ ಆದೇಶವೂ ಇದೆ.
ಆದರೆ ಫ್ರೇಜರ್ ಟೌನ್ ಸಮೀಪದ ರಿಚಸ್ ಪಾರ್ಕ್‌ನಲ್ಲಿನ ಸನ್ನಿವೇಶವೇ ಬೇರೆ.
ಇಂದು ಬೆಳೀಗ್ಗೆ ಈ ಪಾರ್ಕ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮುಂಜಾನೆಯ ವಿಹಾರ, ದೈಹಿಕ ವ್ಯಾಯಾಮದ ಅವಕಾಶ ಹುಡುಕಾಡುತ್ತಿದ್ದ ಜನಸಮೂಹ ಮಾಸ್ಕ್ ಧರಿಸದೆ ಗುಂಪು ಸೇರಿದ್ದ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
ಇದೀ ಜಗತ್ತೇ ಕೋವಿಡ್ ಬಗ್ಗೆ ಆತಂಕಗೊಂಡಿದ್ದರೆ, ಈ ಪಾರ್ಕ್ ಬಳಿ ಜನ ಕೊರೋನಾ ಬಗ್ಗೆ ಅರಿವೇ ಇಲ್ಲದಂತಿದ್ದರು.
ಈ ಸನ್ನಿವೇಶ ಇಂದು ನಿನ್ನೆಯದಲ್ಲ. ನಿತ್ಯವೂ ಜನ ಇದೇ ರೀತಿ ಸೇರುತ್ತಾರೆ. ಪೊಲೀಸರಿಗೂ ಮಾಹಿತಿ ಇದೆ. ನಿರ್ಲಕ್ಷ್ಯದ ವ್ಯವಸ್ಥೆಯಿಂದಾಗಿ ಜನ ಈ ರೀತಿ ಮೈ ಮರೆತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.