ಚಾಮರಾಜನಗರ ಆಸ್ಪತ್ರೆ ದುರಂತ ತನಿಖೆಗೆ ಸವಾಲು.. ಅದಕ್ಕಿಂತಲೂ ಬಿಜೆಪಿ ಹೈಕಮಾಂಡ್‌ಗೆ ಸವಾಲಾಗಿರೋದು ‘ರಿಸೈನ್ ಸುಧಾಕರ್’ ಅಭಿಯಾನ.. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ #ResignSudhakar ಅಭಿಯಾನ..
ಬೆಂಗಳೂರು: ಚಾಮರಾಜನಗರದ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವಿನ ಘಟನೆ ತನಿಖೆಗೂ ಸವಾಲಾಗಿದೆ. ಈ ಪ್ರಕರಣ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.
ಈ ನಡುವೆ ಘಟನೆಯ ನೈತಿಕ ಹೊಣೆ ಹೊತ್ತು ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಕಾಂಗ್ರಸ್ ಒತ್ತಾಯಿಸಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡುತ್ತಿರುವಂತೆಯೇ ಇನ್ನೊಂದೆಡೆ ಸಾಮಾಜಿಕ ಜಾಲತಣಗಳಲ್ಲಿ ರಿಸೈನ್‌ಸುಧಾಕರ್ ಅಭಿಯಾನ ಆರಂಭವಾಗಿದೆ.
ಟ್ವಿಟರ್ ತುಂಬೆಲ್ಲಾ ResignSudhakar ಅಭಿಯಾನ ಭಾರೀ ಟ್ರೆಂಡ್ ಆಗುತ್ತಿದ್ದು ಇದರಿಂದ ರಾಜ್ಯ ಸರ್ಕಾರಕ್ಕಷ್ಟೇ ಅಲ್ಲ, ಬಿಜೆಪಿ ಹೈಕಮಾಂಡ್‌ಗೂ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದೆ.