ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಸಿಡಿ ವಿವಾದ ಹಲವಾರು ತಿರುವುಗಳನ್ನು ಪಡೆಯುತ್ತಿದ್ದು, ಇದನ್ನು ನಕಲಿ ಎಂದಿರುವ ಮಾಜಿ ಸಚಿವ ಜಾರಕಿಹೊಳಿ ಮತ್ತಷ್ಟು ಸ್ಫೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಇದೊಂದು ಫೇಕ್ ಸಿಡಿ. ಇದು ಒಬ್ಬ ಮಹಾನ್ ನಾಯಕನ ಕುತಂತ್ರವಾಗಿದೆ ಎಂದು ಆರೋಪಿಸಿದರು.
ಸಿಡಿ ರಿಲೀಸ್ ಒಂದು ಪಿತೂರಿಯಾಗಿದ್ದು, ನಾಲ್ವರು ಸೇರಿ ನಡೆಸಿದ್ದಾರೆ. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ತೊಡೆತಟ್ಟಿದರು. ಯಶವಂತಪುರದ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ನಡೆದ ಷಡ್ಯಂತ್ರ ಇದಾಗಿದೆ. ಇದಕ್ಕಾಗಿ ನೂರಾರು ಕೋಟಿ ರು ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಯುವತಿಗೆ ಐದು ಕೋಟಿ ರೂಪಾಯಿ ಜೊತೆಗೆ ಎರಡು ಐಷಾರಾಮಿ ಫ್ಲ್ಯಾಟ್‌ಗಳನ್ನು ನೀಡಲಾಗಿದೆ ಎಂದು ದೂರಿದ ರಮೇಶ್ ಜಾರಕಿಹೊಳಿ, ಈ ವಿಚಾರದಲ್ಲಿ ತಮ್ಮ ನೆರವಿಗೆ ನಿಂತ ಮಾಜಿ ಸಿಎಂ ಕುಮಾರಸ್ವಮಿಯವರ ಸಹಕಾರವನ್ನು ನೆನೆದು ರಮೇಶ್ ಜಾರಕಿಹೊಳಿಯವರು ಬಾವುಕರಾದರು.