ಬೆಂಗಳೂರು: ಸಚಿವ ಸ್ಥಾನದಿಂದ ನಿರ್ಗಮಿಸಿರುವ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯವರಿಗೆ ಮುಜುಗರ ಉಂಟುಮಾಡಿರುವ ಸಿಡಿ ಪರಿಪೂರ್ಣ ನಕಲಿಯೇ?
ಹೌದು ಎನ್ನುತ್ತಿದ್ದಾರೆ ರಮೇಶ್ ಜಾರಕಿಹೊಳಿ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಜ್ಞಾತವಾಸದಲ್ಲಿದ್ದ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅಚ್ಚರಿಗೆ ಕಾರಣರಾದರು. ರಾಜೀನಾಮೆ ನಂತರ ಸಿಡಿ ವಿವಾದ ಕುರಿತು
ಪ್ರತಿಕ್ರಿಯೆಗೆ ಸಿಗದಿದ್ದ ಅವರು, ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ವಿರುದ್ಧ ನಡೆದ ಷಡ್ಯಂತ್ರ ಇದಾಗಿದೆ, ಸಿಡಿ 100 ಪರ್ಸೆಂಟ್ ನಕಲಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ನನ್ನ ಏಳಿಗೆ ಸಹಿಸಿದವರಿಂದ ನಡೆದ ರಾಜಕೀಯ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದ ಅವರು, ಸಿಡಿ ರಿಲೀಸ್ ಆಗುವ ಬೆದರಿಕೆ ನಾಲ್ಕು ತಿಂಗಳ ಹಿಂದೆಯೇ ಇತ್ತು, ಆದರೆ ನಾನು ತಪ್ಪು ಮಾಡಿಲ್ಲದ ಕಾರಣ ಚಿಂತೆಗೀಡಾಗಿಲ್ಲ ಎಂದರು.
ನನಗೆ ರಾಜಕೀಯ ಮುಖ್ಯವಲ್ಲ. ಪಕ್ಷಕ್ಕೆ ಮುಜುಗರವಾಗಬಾರದೆಂದು ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ರಾಜೀನಾಮೆ ನೀಡಿರುವುದಾಗಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ