ಬೆಂಗಳೂರು: ಮಾಜಿ ಸಂಸದ ಅನಂತ್ ಕುಮಾರ್ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಹಳೆಯ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಅನಂತ್ ಕುಮಾರ್ ಪುತ್ರಿ ಐಶ್ವರ್ಯಾ ಕೆಂಡಾಮಂಡಲರಾಗಿದ್ದಾರೆ. ಈ ಕುರಿತಂತೆ ತಾನೂ ಪೋಸ್ಟ್ ಹಾಕಿರುವ ಐಶ್ವರ್ಯ, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಟ್ವೀಟ್ ವಾರ್ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರೂ ಆದ, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ಮಾಜಿ ಸಂಸದ ಅನಂತ್ ಕುಮಾರ್ ಅವರ ಪುತ್ರಿ ಐಶ್ವರ್ಯಾ, ಪ್ರಿಯಾಂಕಾ ಖರ್ಗೆ ವಿರುದ್ಧ ‘X’ನಲ್ಲಿ ಅನಗತ್ಯ ಹೇಳಿಕೆ ನೀಡುವ ಮೂಲಕ ತಮ್ಮ ರಾಜಕೀಯ ಅಪ್ರಬುದ್ಧತೆ ಮತ್ತು ಗಮನ ಸೆಳೆಯುವ ಹತಾಶೆಯನ್ನು ಬಹಿರಂಗಪಡಿಸಿದ್ದಾರೆ ಎಂದು ಟೀಕಿಸಿದ್ದಾರೆ. ಐಶ್ವರ್ಯ ಅವರು ಯಾವುದೇ ರಾಜಕೀಯ ಹುದ್ದೆಯನ್ನು ಹೊಂದಿಲ್ಲ ಅಥವಾ ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಅಧಿಕಾರದ ಸ್ಥಾನದಲ್ಲಿಲ್ಲ. ಈ ಹಿಂದೆ ತನ್ನ ರಾಜಕೀಯ ವೃತ್ತಿಜೀವನಕ್ಕಾಗಿ ಜೆಡಿಎಸ್ ಅವರನ್ನು ಹೊಗಳಿದ್ದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ರಮೇಶ್ ಬಾಬು, ಐಶ್ವರ್ಯ ಅವರು ಯಾವ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬಾ ಬಗ್ಗೆ ಪರೋಕ್ಷವಾಗಿ ಪ್ರಶ್ನಿಸಿದಂತಿದೆ.
‘ಐಶ್ವರ್ಯರ ಹೇಳಿಕೆಗಳು ದೃಢತೆ ಅಥವಾ ಸಿದ್ಧಾಂತದಿಂದ ಹುಟ್ಟಿಕೊಂಡಂತಿಲ್ಲ. ಆದರೆ RSS-BJP ಬಗ್ಗೆ ಒಲವು ತೋರುವ ಪ್ರಯತ್ನ ಇದ್ದಂತಿದೆ. ರಾಜಕೀಯ ಅಭಿಪ್ರಾಯ ಮೂಲಕ ತಮ್ಮನ್ನು ತಾವು ನಾಯಕರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿಗಳ ಅಗ್ಗದ ಪ್ರಚಾರ ಸಾಹಸಗಳಿಗೆ ಇಳಿದಂತಿದೆ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.
Former MP Anant Kumar’s daughter Aishwarya has exposed her political immaturity and desperation for attention by making an unwarranted comment against Priyanka Kharge on X. She neither holds any political responsibility nor carries any moral authority to comment on the statements… pic.twitter.com/DeEqpvflOk
— Ramesh Babu (@RameshBabuKPCC) October 22, 2025
‘ವೈಯಕ್ತಿಕ ಲಾಭಕ್ಕಾಗಿ ಪ್ರಿಯಾಂಕಾ ಖರ್ಗೆ ಅವರನ್ನು ಗುರಿಯಾಗಿಸಿಕೊಳ್ಳುವ ಮೂಲಕ ನಾಯಕತ್ವ ಪ್ರದರ್ಶಿಸಲು ಸಾಧ್ಯವಿಲ್ಲ. ಅದು ರಾಜಕೀಯ ಅವಕಾಶವಾದವನ್ನು ಪ್ರತಿಬಿಂಬಿಸಬಹುದಷ್ಟೇ. ರಾಷ್ಟ್ರೀಯ ನಾಯಕರು ತಮ್ಮ ವೈಯಕ್ತಿಕ ಬ್ರ್ಯಾಂಡಿಂಗ್‌ಗೆ ಮೆಟ್ಟಿಲುಗಳಲ್ಲ ಎಂಬುದನ್ನು ಅವರು ನೆನಪಿನಲ್ಲಿಡಬೇಕು. ರಾಷ್ಟ್ರೀಯ ನಾಯಕರಾಗಿ ಅನಂತಕುಮಾರ್ ಯಾವಾಗಲೂ ರಾಜಕೀಯ ವಿಮರ್ಶಕರನ್ನು ಸ್ವೀಕರಿಸಲು ಬಳಸುತ್ತಾರೆ. ಹಾಗಾಗಿ, ಅಗ್ಗದ ಜನಪ್ರಿಯತೆಯ ಬದಲು ತನ್ನ ತಂದೆಯ ಆಲೋಚನಾ ನಡೆಯನ್ನು ಅನುಸರಿಸಿ’ ಎಂದು ರಮೇಶ್ ಬಾಬು ಕಿವಿಮಾತು ಹೇಳಿದ್ದಾರೆ.