ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹುಬ್ಬಳ್ಳಿ ಕಿಮ್ಸ್ ಕಾಲೇಜ್ ನ ವೈದ್ಯಕೀಯ ವಿದ್ಯಾರ್ಥಿ ಆದಿತ್ಯ ನವಲಿಹಾಳ್, ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಅಂಕೋಲಾದ ಕೆಎಲ್‌ಇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ವೈದ್ಯ ದಂಪತಿಗಳಾದ ಡಾ. ಸಂಜೀವ್ ನವಲಿಹಾಳ್ ಮತ್ತು ಡಾ. ಲತಾ ಮಂಕಾನಿ ಅವರ ಪುತ್ರನಾಗಿರುವ ಆದಿತ್ಯ, ಮೈಕ್ರೋ ಬಯಾಲಜಿ ವಿಷಯದಲ್ಲಿ 5 ನೇ ರಯಾಂಕ್ ಮತ್ತು ಜನರಲ್ ಮೆಡಿಸಿನ್ ವಿಷಯದಲ್ಲಿ 7 ನೇ ರಾಂಕ್ ಗಳಿಸಿದ್ದಾರೆ.
ಹಾಗೆಯೇ ಮೈಕ್ರೋ ಬಯಾಲಜಿ ವಿಷಯದಲ್ಲಿ ದಿ. ಬಾಲಕೃಷ್ಣ ಪಿನೋಲೆ ಪುರಸ್ಕಾರ ಹಾಗೂ ಜನರಲ್ ಮೆಡಿಸಿನ್ ವಿಷಯದಲ್ಲಿ ವೇರಂದಾ ಮತ್ತು ಶಿವಪ್ಪ ಹೆಸರಿನ ಪುರಸ್ಕಾರವನ್ನೂ ಸಹಾ ಆದಿತ್ಯ ಪಡೆದಿದ್ದಾರೆ.
ಘಟಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಮತ್ತು ಬಾಂಬೆ ಹೃದ್ರೋಗ ಆಸ್ಪತ್ರೆಯ ತಜ್ಞ ಡಾ. ಬಿಸಿ ಕಲ್ಮಠ್ ಅವರು ಆದಿತ್ಯ ನವಲಿಹಾಳ್ ಅವರಿಗೆ ಚಿನ್ನದ ಪದಕ ಮತ್ತು ಪುರಸ್ಕಾರಗಳನ್ನು ನೀಡಿ ಗೌರವಿಸಿದರು.