ಬೆಂಗಳೂರು: ಸ್ವಾವಲಂಬಿ- ಸಶಕ್ತ ಭಾರತದ ಪರಿಕಲ್ಪನೆಯೊಂದಿಗೆ 2021-22ರ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ಕೋವಿಡ್ 19 ವಿರುದ್ಧ ಸ್ವದೇಶಿ ಲಸಿಕೆ ಉತ್ಪಾದನೆಗೆ ಹೆಚ್ಚು ಹಣ ನೀಡಿದ್ದು, ಇದರಿಂದಾಗಿ ಜನರಲ್ಲಿದ್ದ ಆತಂಕ ನಿವಾರಣೆಯಾಗಿ, ಧೈರ್ಯ ಹೆಚ್ಚಳವಾಗಲಿದೆ. ಇದು ಉತ್ಪಾದಕತಾ ವೃದ್ಧಿಗೆ ಪೂರಕ ಎಂದಿರುವ ಅವರು, ಮೂಲಸೌಕರ್ಯ ವೃದ್ಧಿ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹಣ ಹೂಡಿಕೆ, ಮೆಟ್ರೊ, ರೈಲ್ವೆ, ಬಂದರು ಅಭಿವೃದ್ಧಿಯ ಕ್ರಮದಿಂದ ದೇಶವು ಪ್ರಗತಿಪಥದಲ್ಲಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಭವಿಷ್ಯದ ಚಿಂತನೆಯನ್ನು ಮನಸ್ಸಿನಲ್ಲಿಟ್ಟು ಯೋಜನೆಗಳನ್ನು ರೂಪಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಪೂರಕ ಚಿಂತನೆಗಳೂ ಬಜೆಟ್‍ನಲ್ಲಿವೆ. ಇದಕ್ಕಾಗಿ ಜನಪರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಜನರ ಪರವಾಗಿ ಅಭಿನಂದಿಸುವುದಾಗಿ ಸಿ.ಟಿ.ರವಿ ಅವರು ಹೇಳಿದ್ದಾರೆ.