ಒಂದೊಮ್ಮೆ ಕಂಡೆಕ್ಟರ್.. ಇದೀಗ ಸೂಪರ್ ಸ್ಟಾರ್.. ‘ಜೈಲರ್’ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಸಕತ್ ಖುಷಿಯಲ್ಲಿರುವ ರಜನೀಕಾಂತ್ ಅವರು ಬೆಂಗಳೂರಿನಲ್ಲಿ ಮಂಗಳವಾರ ಬಿಎಂಟಿಸಿ ಕಚೇರಿಗೆ ಭೇಟಿ ನೀಡಿ ಕುತೂಹಲದ ಕೇಂದ್ರಬಿಂದುವಾದರು.
ಜೈಲರ್ ಸಕ್ಸಸ್ ಖುಷಿಯಲ್ಲಿರುವ ರಜನಿಕಾಂತ್ ಬೆಂಗಳೂರಲ್ಲಿ ರೌಂಡ್ಸ್ ಹಾಕಿದ್ದು, ಅದರ ನಡುವೆ, ಜಯನಗರದಲ್ಲಿರುವ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದರು.
ಜಯನಗರದಲ್ಲಿರುವ ಬಿಎಂಟಿಸಿ ಡಿಪೋ 4ಕ್ಕೆ ತಮ್ಮ ಗೆಳೆಯ ರಾಜ್ ಬಹದ್ದೂರ್ ಜೊತೆ ಭೇಟಿ ನೀಡಿದ ರಜನಿಕಾಂತ್ ಕೆಲ ಕಾಲ ನೌಕರರ ಜೊತೆ ಸಮಯ ಕಳೆದರು. ಬಿಎಂಟಿಸಿ ನೌಕರರು ರಜನಿಕಾಂತ್ ಜೊತೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು.
ಈ ಹಿಂದೆ ಬಿಎಂಟಿಸಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್ ಬಳಿಕ ಸಿನಿಮಾ ರಂಗ ಪ್ರವೇಶಿಸಿ ಇದೀಗ ಸೂಪರ್ ಸ್ಟಾರ್ ಆಗಿದ್ದಾರೆ. ಇಂದು ಅವರು ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ ವೇಳೆ ತಮ್ಮ ಹಳೇಯ ವೃತ್ತಿ ಬದುಕಿನ ಬಗ್ಗೆ ಮೆಲುಕುಹಾಕಿದರು.







































































