ಚೆನ್ನೈ: ಪಾಂಡಿಚೇರಿಯಲ್ಲೂ ಬದಲಾವಣೆಯ ಪರ್ವದ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ಹೀನಾಯ ಸೋಲು ಉಂಟಾಗಿದ್ದು ಈ ರಾಜ್ಯದಲ್ಲಿ ಈ ಬಾರಿ ಎನ್‌ಡಿಎ ಮಿತ್ರಕೂಟ ಮೇಲುಗೈ ಸಾಧಿಸಿದೆ. ಈ ರಾಜ್ಯದಲ್ಲೂ ಅಣ್ಣಾಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕಮಾಲ್ ಮಾಡಿದ್ದರೆ, ಕಾಂಗ್ರೆಸ್-ಡಿಎಂಕೆ ಮೈತ್ರಿ ಪಡೆಯು ಪರಾಜಯವನ್ನು ಒಪ್ಪಿಕೊಂಡಿದೆ. ಆದರೆ ಯಾರ ಸಾರಥ್ಯದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುದೇ ಕುತೂಹಲ.
ಬಲಾಬಲ ಹೀಗಿದೆ:
- ಪಾಂಡಿಚೇರಿ ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳು: 30
- ಎನ್‌ಡಿಎ: 14
- ಯುಪಿಎ: 13
- ಇತರರು : 02