ಚೆನ್ನೈ: ದೇವರ ನಾಡು ಕೇರಳದಲ್ಲಿ ಎಡರಂಗ ಮತ್ತೊಮ್ಮೆ ಪಾರುಪಥ್ಯ ಮೆರೆದಿದೆ. 140 ಸದಸ್ಯಬಲದ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ 99 ಸ್ಥಾನಗಳಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ.
ಪಿನರಾಯ್ ವಿಜಯ್ ನಾಯಕತ್ವದಲ್ಲಿ ಎಡರಂಗ ಈ ಬಾರಿ ಚುನಾವಣೆ ಎದುರಿಸಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಎಲ್‌ಡಿಎಫ್ ಅಂತಿನ ಹಂತದವರೆಗೂ ಮೇಲುಗೈ ಸಾಧಿಸುತ್ತಾ ಬಂದಿದೆ.
ಬಲಾಬಲ (ಮುನ್ನಡೆ) ಹೀಗಿದೆ
- ಕೇರಳ ವಿಧಾನಸಭೆಯಲ್ಲಿ ಒಟ್ಟು ಸದಸ್ಯ ಬಲ 140
- ಎಲ್‌ಡಿಎಫ್ – 99
- ಯುಡಿಎಫ್ – 41