ಕೆಲವು ದಿನಗಳಿಂದ ಸುರಿಯುತ್ತರುವ ನಿರಂತರ ಮಳೆ ಹಾಗೂ ಸರಣಿ ಅವಘಡಗಳಿಂದಾಗಿ ದಕ್ಷಿಣದ ರಾಜ್ಯಗಳು ತತ್ತರಿಸುವಂತಾಗಿದೆ. ಅದರಲ್ಲೂ ತಮಿಳುನಾಡಿನ ಹಲವು ಜಿಲ್ಲೆಗಳು ಪ್ರಳಯ ಪ್ರವಾಹದಿಂದಾಗಿ ನಲುಗಿದೆ.
ಈ ನಡುವೆ, ಚೆನ್ನೈನಲ್ಲಿ ಬಿರುಗಾಳಿ ಮಳೆಯ ಹೊಡೆತಕ್ಕೊಳಗಾಗಿ ಮರವೊಂದು ಉರುಳಿ ಬಿದ್ದಿದೆ. ಈ ದುರಂತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
Police inspector madam Rajeshwari rescued a unconscious person .She lift that man to her shoulder and rushing to the hospital.Her action can't be described in words,it is ineffable. It seems like she apt for that uniform. #ChennaiRains #inspectorrajeshwari #chennaifloods pic.twitter.com/vIQrJR6ATQ
— BHARAT N S (@Bharat_N_S) November 11, 2021
ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಇನ್‌ಸ್ಪೆಕ್ಟರ್ ರಾಜೇಶ್ವರಿ ಎಂಬವರು, ಪರೀಕ್ಷಿಸಿದಾಗ ಯುವಕ ಇನ್ನೂ ಬದುಕಿರುವುದು ಗೊತ್ತಾಯಿತು. ಆ ಕೂಡಲೇ ಸಮಯಪ್ರಜ್ಞೆ ಅರಿತ ಮಹಿಳಾ ಇನ್‌ಸ್ಪೆಕ್ಟರ್ ಈ ಗಾಯಾಳುವನ್ನು ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಆಪತ್ಬಾಂಧವ ಪೊಲೀಸ್ ಅಧಿಕಾರಿಯ ಈ ಕರ್ತವ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.