ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ:
- ಕೊರೋನಾ ಪರಿಸ್ಥಿತಿ ದೇಶಕ್ಕೇ ಸವಾಲು.. ಇದನ್ಬು ನಿಭಾಯಿಸುವಲ್ಲಿ ಭಾರತ ಯಶಸ್ವಿಯಾಗುತ್ತಿದೆ.
- ದೇಶದ ಹಲವು ರಾಷ್ಟ್ರಗಳಲ್ಲಿ ಲಸಿಕೆ ನಿಧಾನಗತಿಯಲ್ಲಿದೆ. ಆದರೆ ಭಾರತ ಹಿಂದೆ ಉಳಿದಿಲ್ಲ.
- ಭಾರತದಲ್ಲೀಗ ಲಸಿಕೆ ವೇಗ ಹೆಚ್ಚುತ್ತಿದೆ.
- ಕಡಿಮೆ ಸಮಯದಲ್ಲಿ ಹೆಚ್ಚಿನ ವ್ಯಾಕ್ಸಿನ್ ಉತ್ಪಾದನೆಯಾಗುತ್ತಿದೆ.
- ಇನ್ನೂ ಮೂರು ಕಂಪೆನಿಗಳು ಪ್ರಯೋಗದ ಹಂತದಲ್ಲಿವೆ.
- ವಾರಿಯರ್ಸ್ ವ್ಯಾಕ್ಸಿನ್ ಪಡೆದು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ.
- ಇನ್ನು ಮುಂದೆ ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಲಸಿಕೆ ಪೂರೈಸಲಿದೆ.
- ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಪೂರೈಕೆ ಮಾಡಲಿದೆ.
- ಮುಂದಿನ 2 ವಾರಗಳ ಬಳಿಕ ಕೇಂದ್ರ ಲಸಿಕೆ ಪೂರೈಕೆ ಮಾಡಲಿದೆ.
- ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ನೀಡಲಿದೆ.
- ದೇಶದ ಎಲ್ಲಾ ಜನರಿಗೆ ಲಸಿಗೆ ಸಿಗಲಿದೆ.
- ಖಾಸಗಿ ಆಸ್ಪತ್ರೆಗಳೂ ಶೇ.25ರಷ್ಟು ಲಸಿಕೆ ಪಡೆಯಲು ಅವಕಾಶವಿದೆ.
- ಇದಕ್ಕೆ ಖಾಸಗಿ ಆಸ್ಪತ್ರೆಗಳು ಸೇವಾ ಶುಲ್ಕ ಕೇವಲ 150 ರೂಪಾಯಿ.
- ಇದರ ಜೊತೆಗೆ ಕಡು ಬಡವರಿಗೆ ಪಡಿತರ ವಿತರಣೆಗೆ ಕ್ರಮ
- ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡಲಾಗುವುದು.
- ನವೆಂಬರ್ ತಿಂಗಳವರೆಗೂ ಆಹಾರ ಧಾನ್ಯ ನೀಡಲಾಗುವುದು.
- ಯಾವೊಬ್ಬ ನಾಗರಿಕನೂ ಹಸಿವಿನಿಂದ ಸಾಯಬಾರದು.
- ದೀಪಾವಳಿವರೆಗೆ ಉಚಿತ ಆಹಾರ ಧಾನ್ಯ ನೀಡಲಾಗುವುದು.