ಗದಗ್: ಮೂರನೇ ಹಂತ ಕೋವಿಡ್ ಲಸಿಕೆಕ್ಕೆ ವಿತರಣೆ ವಿಚಾರಕ್ಕೆ ಗದಗನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಕೊರೊನಾ ಲಸಿಕೆ ಕುರಿತು ವಿರೋಧ ಪಕ್ಷದ ನಾಯಕರು ವಿಶೇಷವಾಗಿ ಕಾಂಗ್ರೆಸನವರು ಅಪಸ್ವರ ಎತ್ತಿದ್ದರು. ಎಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಬರುತ್ತೇ ಅಂತಾ. ಜನರಲ್ಲಿ ಆತಂಕ ಸೃಷ್ಟಿ ಮಾಡುವ ಕೆಲಸವನ್ನು ಮಾಡಿದ್ರು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಎಷ್ಟು ಸುರಕ್ಷಿತ ಎನ್ನುವದನ್ನು ತೊರಿಸಿಕೊಂಡಿದ್ದಾರೆ. ಮೊದಲ ಲಸಿಕಾ ಅಭಿಯಾನ ಯಶಸ್ವಿಯಾಗದಿರಲೂ ವಿರೋಧ ಪಕ್ಷ ಕಾರಣ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅವರು ಲಸಿಕೆ ಕುರಿತು ಅಪಪ್ರಚಾರ ಮಾಡಿದ್ರು, ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದ್ದಾರೆ. ಅಪಪ್ರಚಾರ ಕುರಿತು ಜನ ಕಿವಿಗೊಡಬಾರದು ಎಂದು ಸಿ.ಸಿ.ಪಾಟೀಲ್ ಮನವಿ ಮಾಡಿಕೊಂಡಿದ್ದಾರೆ.
ಸಚಿವ ಸಿ.ಸಿ.ಪಾಟೀಲ್ ಅವರು ಸಹ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂದ್ರು. ನಮಗೆ ಗುಂಡು ಬಡೆದ ಸಂದರ್ಭದಲ್ಲಿ ಎಲ್ಲಿಯೇ ಚಿಕಿತ್ಸೆ ಪಡೆದಿದ್ದೆ ಹೀಗಾಗಿ ನಾನು ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಹಾರಿಸಿಕೊಳ್ಳುತ್ತೇನೆ. ಕೋವಿಡ್ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರಿಗೂ ಅಭಿನಂದನೆ ಸಲ್ಲಿಸಿದ ಸಚಿವ ಸಿ.ಸಿ.ಪಾಟೀಲ್ ಅವರು.