ಚಿತ್ರದುರ್ಗ: ಪಾಂಚಮಸಾಲಿಗಳ ಹೋರಾಟ ತೀವ್ರಗೊಂಡಿದ್ದು ಬಿಜೆಪಿ ಸರ್ಕಾರಕ್ಕೆ ಸವಾಲೆಂಬಂತಾಗಿದೆ. ಪಂಚಮಸಾಲಿ ಸನುದಾಯಕ್ಜೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಹೋರಾಟ 50 ದಿನ ಕ್ರಮಿಸಿದೆ. 50ನೇ ದಿನವಾದ ಶನಿವಾರ ರಾಜ್ಯದ ಹಲವೆಡೆ ಪಂಚಮಸಾಲಿ ಸಮುದಾಯದವರು ಹೆದ್ದಾರಿ ತಡೆ ನಡೆಸಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ಹೊರಹಾಕಿದರು.
ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಸತ್ಯಾಗ್ರಹಕ್ಕೆ ಪಂಚನಸಾಲಿ ಸಮುದಾಯದಿಂದ ಭಾರೀ ಬೆಂಬಲ ವ್ಯಕ್ತವಾಯಿತು.
ಇದೇ ವೇಳೆ, ಚಿತ್ರದುರ್ಗದ ಸಿಎಂ ಬಸವರಾಜ್ ಬೊಮ್ಮಾಯಿಯವರು ಪಾಲ್ಗೊಂಡ ಸಮಾರಂಭದಲ್ಲಿ ಅಚ್ಚರಿಯ ಘಟನೆ ನಡೆಯಿತು. 2ಏ ಮೀಸಲಾತಿಗೆ ಆಗ್ರಹಿಸಿ ಮುರುಘಾ ಮಠದ ಬಳಿ ಪಂಚಮಸಾಲಿ ಹೋರಾಟಗಾರರು ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು. ಚಿತ್ರದುರ್ಗ ನಗರದಲ್ಲಿ ಪಲಾನುಬವಿಗಳ ಬೃಹತ್ ಸಮಾವೇಶ ನಿಮಿತ್ತ ಹೆಲಿಕಾಪ್ಟರ್ ಮೂಲಕ ಮುರುಘಾ ಮಠದ ಹೆಲಿಪ್ಯಾಡ್ ಗೆ ಆಗಮಿಸಿದ ಸಿಎಂ ಬೊಮ್ಮಾಯಿ ಅವರಿಗೆ ಲಿಂಗಾಯತ ಪಂಚಮಸಾಲಿ ಸಮಾಜದ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು, ತಮ್ಮ ಸಮುದಾಯಕ್ಕೆ 2ಎ ಮೀಸಲಾತಿಗೆ ಕಲ್ಪಿಸಬೇಕೆಂದು ಆಗ್ರಹಿಸಿ ಕಪ್ಪು ಪಟ್ಟಿ ಪ್ರದರ್ಶಿಸಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಿಂಗಾಯತ ಪಂಚಮಸಾಲಿ ಹೋರಾಟಗಾರರನ್ನು ಬಂದಿಸಿ ಕರೆದೊಯ್ದರು. ಪಂಚಮಸಾಲಿ ಯುವ ವೇಧಿಕೆ ಅಧ್ಯಕ್ಷ ಹೆಚ್ ಎಂ ಮಂಜುನಾಥ್, ಜಿಲ್ಲಾಧ್ಯಕ್ಷರಾದ ಗಂಗಾದರಪ್ಪ ಕೆಸಿ, ಜಾಲಿಕಟ್ಟೆ ಶಿವಕುಮಾರ್, ವಿಜಯ್ ಕುಮಾರ್ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.