ಮಂಗಳೂರು: ಕಾರಾವಳಿ ಜಿಲ್ಲೆಗಳನ್ನು ತಲ್ಲಣಗೊಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ನಿಗೂಢತೆ ಕೊನೆಗೂ ಬಯಲಾಗಿದೆ. ಈ ಭೀಕರ ಕೃತ್ಯದ ಹೊಣೆಯನ್ನು ಉಗ್ರಗಾಮಿ ಸಂಘಟನೆ ಕೊನೆಗೂ ಹೊತ್ತುಕೊಂಡಿದೆ. 2022ರ ನವೆಂಬರ್ 9ರಂದು ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು.
ಮಂಗಳೂರು ಕುಕ್ಕರ್ ಬಾಂಬ್ ವಿಧ್ವಂಸ ಹಾಗೂ ಕೊಯಮತ್ತೂರು ಸ್ಫೋಟದ ಹೊಣೆಯನ್ನು ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತಿದೆ. ಇಸ್ಲಾಮಿಕ್ ಸ್ಟೇಟ್ನ ಸಹ ಸಂಘಟನೆಯಾದ ಖೊರಾಸನ್ನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಐಎಸ್ಕೆಪಿ) ಈ ದಾಳಿಗಳ ಹೊಣೆ ಹೊತ್ತಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಉಗ್ರಗಾಮಿ ಸಂಘಟನೆ ಮಾಹಿತಿ ಹಂಚಿಕೊಂಡಿದೆ.
#India: Islamic State Wilāyah Khorāsān claims, in its Voice of Khorāsān magazine – Issue 23, that the blast in Mangalore, Karnataka last year was carried out by IS affiliated militant(s). https://t.co/Ueu4gHfR4u
— 📜 (@cozyduke_apt29) March 4, 2023
ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿ ಮಾಡುವ ಉದ್ದೇಶ ಉಗ್ರರದ್ದಾಗಿತ್ತು. ಆದರೆ ಕುಕ್ಕರ್‌ನಲ್ಲಿ ಬಾಂಬ್ ಇಟ್ಟುಕೊಂಡು ಹೋಗುತ್ತಿದ್ದಾಗ ಬೇರೆ ಕಡೆ ಅಚಾನಕ್ ಆಗಿ ಸ್ಫೋಟವಾಗಿದೆ ಎನ್ನಲಾಗಿದೆ.