ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸರ್ಕಾರದ ಆದೇಶ ಪತ್ರ ಇದೀಗ ಸಮುದಾಯದ ಜಗದ್ಗುರುಗಳಿಗೆ ಹಸ್ತಾಂತರಗೊಂಡಿದೆ. ಈ ಸನ್ನಿವೇಶವನ್ನು ಕಾಣುವ ಸನುದಾಯದ ಬಹುಕಾಲದ ಕನಸು ಇದೀಗ ನನಸಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಪಂಚಮಸಾಲಿ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಸರ್ಕಾರದ ಆದೇಶಪತ್ರವನ್ನು ಹಸ್ತಾಂತರಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಥಮ ಜಯದ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 30) ಸಿಎಂ ನಿವಾಸದಲ್ಲಿ ಹೋರಾಟದ ರುವಾರಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಿಗೆ ಸಿಎಂ ಬೊಮ್ಮಾಯಿಯವರು ಸರ್ಕಾರಿ ಆದೇಶ ಪತ್ರ ನೀಡಿ ಗೌರವ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿಯೊಂದಿಗೆ ಎಲ್ಲಾ ಲಿಂಗಾಯತರಿಗೂ ಮೀಸಲಾತಿಯಲ್ಲಿ ಅವಕಾಶ ಕಲ್ಪಿಸಿ ಕೊಟ್ಟ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಶ್ರೀ ಪೀಠದ ಪರವಾಗಿ ಬಸವಜಯ ಮೃತ್ಯುಂಜಯ ಶ್ರೀಗಳು ಅಭಿನಂದಿಸಿದರು.
ಇಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು, ಸರ್ಕಾರ ಇತ್ತಿಚೆಗಷ್ಟೇ ಆದೇಶಿಸಿದ್ದ ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ಮೀಸಲಾತಿ ಪ್ರಮಾಣದ ಹೆಚ್ಚಳದ ಆದೇಶ ಪತ್ರವನ್ನು ಪಡೆದುಕೊಂಡು, ನುಡಿದಂತೆ ನಡೆದ ಸರ್ಕಾರವನ್ನು ಶ್ಲಾಘಿಸಿದರು, ಅಖಂಡ ಸಮುದಾಯದ ಪರವಾಗಿ ಸನ್ಮಾನ ಸ್ವೀಕರಿಸೆದೆನು. pic.twitter.com/Amh8bxGbP8
— Basavaraj S Bommai (Modi Ka Parivar) (@BSBommai) March 30, 2023
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಚುನಾವನೆ ನೀತಿ ಸಂಹಿತೆ ಜಾರಿ ಇರುವುದರಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಚುನಾವಣೆ ನಂತರ ಮೀಸಲಾತಿ ಹೆಚ್ಚಳಗಾಗಿ ಕೆಂದ್ರ ಒಬಿಸಿಗಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ಚ್ 25 ರಂದು 71 ನೇ ದಿನದ ಸತ್ಯಾಗ್ರಹ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಶ್ರೀಗಳಿಗೆ ಕೊಟ್ಟ ಮಾತಿನಂತೆ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್ ಅವರು ಮಾರ್ಚ್ 27 ರಂದು ಹೋರಾಡಿಸಲಾಗಿದ್ದ ಸರ್ಕಾರ ಆದೇಶ ಪತ್ರವನ್ನು ಪಡೆಯುವಲ್ಲಿ ಯಶಸ್ವಿಯಾದರು*.
‘ನಾವು ಎರಡು ವರ್ಷದ ಎರಡು ತಿಂಗಳಿಂದ , ಪಂಚಮಸಾಲಿ ಲಿಂಗಾಯತ ಗೌಡ , ಮಲೆಗೌಡ ದೀಕ್ಷಾ ಲಿಂಗಾಯತ, ಮಕ್ಕಳಿಗಾಗಿ ಶ್ರೀಪೀಠವನ್ನು ಬಿಟ್ಟು ಪಾದಯಾತ್ರೆ , ಸಮಾವೇಶ , ಸತ್ಯಾಗ್ರಹ ಮೂಲಕ ಐತಿಹಾಸಿಕ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ನಾವು ಕೇಳಿದ್ದು ಶೇ 15 ರ 2ಎ ಮೀಸಲಾತಿ. ಅದರೆ ಸರ್ಕಾರ ಶೇ 7 ರ 2d ಎಂಬ ನೂತನ ಮೀಸಲಾತಿ ಸೃಷ್ಟಿ ಮಾಡಿತು. 2ಎ ಮೀಸಲಾತಿ ಪಡೆಯಲು ಉಚ್ಚಾ ನ್ಯಾಯಾಲಯದಲ್ಲಿ ತಡೆ ಇರುವುದರಿಂದ 2d ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಸರ್ಕಾರ ಶೇ 7 ರ ಮೀಸಲಾತಿ ಕೊಟ್ಟಿರುವುದು ನಮ್ಮ ನಿರಂತರ ಹೋರಾಟಕ್ಕೆ ಪ್ರಥಮ ಐತಿಹಾಸಿಕ ಜಯವಾಗಿದೆ ಎಂದು ಶ್ರೀಗಳು ಹೇಳಿದರು.
ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಿಗೆ , ಕಾರ್ಯದರ್ಶಿ ಎಚ್ ಎಸ್ ಶಿವಶಂಕರ, ವಿನಯ ಕುಲಕರ್ಣಿ, ಸಚಿವ ಸಿಸಿ ಪಾಟೀಲ್ , ಸಚಿವ ಶಂಕರ ಪಾಟೀಲ್ ಮುನೆನಕೊಪ್ಪ , ಎಬಿ ಪಾಟೀಲ್ , ಸಿದ್ದುಸವದಿ , ಅರವಿಂದ ಬೆಲ್ಲದ್ ಸಂಸದರಾದ ಕರಡಿ ಸಂಗಣ್ಣ , ಈರಣ್ಣ ಕಡಾಡಿ, ಲಕ್ಷ್ಮಿ ಹೆಬ್ಬಳಕಾರ್ , ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಚಿವರುಗಳಿಗೆ , ಎಲ್ಲಾ ಪಕ್ಷಗಳ ಹಾಲಿ ಮಾಜಿ ಜನಪ್ರತಿನಿಧಿಗಳಿಗೆ , ಕಾನೂನು ತಜ್ಞ ದಿನೇಶ್ ಪಾಟೀಲ್ , ಮಲೆಗೌಡ ಲಿಂಗಾಯತ ಗೌಡ ದೀಕ್ಷಾ ಲಿಂಗಾಯತ ಮುಖಂಡರುಗಳಿಗೆ , ನಾಡಿನ ಎಲ್ಲಾ ಪದಾಧಿಕಾರಿಗಲಿಗೆ , ವಿವಿಧ ಘಟಕಗಳ ಪದಾಧಿಕಾರಿಗಲಿಗೆ , ಮಾಧ್ಯಮದವರಿಗೆ ಹಾಗೂ ಸಮಾಜದ ಪ್ರತಿಯೊಬ್ಬನಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ ಶ್ರೀಗಳು ತಿಳಿಸಿದರು. ಲಿಂಗಾಯತ ಪಂಚಮಸಾಲಿ ಮೀಸಲಾತಿ ಆದೇಶ ಪತ್ರ ದೊರೆತ ಕಾರಣ *ಸಮಾಜ ಬಾಂಧವರು ಗ್ರಾಮ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ವಿಜಯೋತ್ಸವ ಮಾಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದ್ರಾಕ್ಷಿ ನಿಗಮದ ಅಧ್ಯಕ್ಷ ಎಂ ಎಸ್ ರುದ್ರಗೌಡ, ಶಾಸಕ ಸಿದ್ದುಸವದಿ ,ಮಾಜಿ ಸಚಿವ ಶಶಿಕಾಂತ್ ನಾಯಕ , ಪಂಚಸೇನಾ ಅಧ್ಯಕ್ಷ ಡಾ ಬಿ ಎಸ್ ಪಾಟೀಲ್ ನಾಗರಳ್ ಹುಲಿ , ಯುವ ಅಧ್ಯಕ್ಷ ಗುಂಡು ಪಾಟೀಲ್ ಮೊದಲಾದವರು ಉಪಸ್ತಿತರಿದ್ದರು.