ರಾಮನವಮಿ ಆಚರಣೆ ವೇಳೆ ಭೀಕರ ದುರ್ಘಟನೆ ಸಂಭವಿಸಿದೆ ಮಧ್ಯಪ್ರದೇಶದ ಇಂಧೋರ್ ಬಳಿ ರಾಮನವಮಿ ಆಚರಣೆ ವೇಳೆ ಮೆಟ್ಟಿಲುಗಳ ಬಾವಿಯ ಮೇಲೆ ಹಾಸಿದ್ದ ಸಿಮೆಂಟ್ ಹಾಸು ಕುಸಿದು ಬಿದ್ದ ಘೋರ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ 8 ಮಂದಿ ಸಾವನ್ಬಪ್ಪದ್ದು ಅನೇಕ ಭಕ್ತರು ಬಾವಿಯೊಳಗೆ ಸಿಲುಕಿದ್ದರು.
मध्य प्रदेश के #इंदौर में हुई दुर्घटना अत्यंत दु:खद एवं दुर्भाग्यपूर्ण है।
प्रभु श्री राम जी से सभी श्रद्धालुओं के सकुशल होने एवं घायलों के शीघ्र स्वास्थ्य होने की प्रार्थना करता हूॅं।
प्रभु श्री राम सभी श्रद्धालुओं की रक्षा करें।#Indore pic.twitter.com/EyEFS05ify
— Vishal Hindu (मोदी का परिवार) (@VSHindu_) March 30, 2023
ಇಂದೋರ್ ನ ಶ್ರೀಬೇಲೆಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನ ಬಳಿ ಈ ದುರ್ಘಟನೆ ನಡೆದಿದೆ. ರಾಮನವಮಿ ಸಂದರ್ಭದ ಪೂಜಾ ಕೈಂಕರ್ಯ ವೇಳೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ವೇಳೆ ಮಂದಿರದ ಒಂದು ಭಾಗದಲ್ಲಿ ಬಾವಿಗೆ ಹಾಸಲಾಗಿದ್ದ ಛಾವಣಿ ಏಕಾಏಕಿ ಕುಸಿತದು ಬಿದ್ದಿದೆ ಎನ್ಬಲಾಗಿದೆ. ಆವೇಳೆ 25ಕ್ಕೂ ಹೆಚ್ಚು ಮಂದಿ ಬಾವಿಯೊಳಗೆ ಬಿದ್ದರೆನ್ನಲಾಗಿದೆ.
8 devotees, including two children rescued so far. 10-15 devotees could still be trapped inside the collapsed structure. #Indore @makarandkale pic.twitter.com/yDrsxk2z4Q
— Utkarsh Singh (@utkarshs88) March 30, 2023
ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಅಗ್ನಿಶಾನಕ ದಳ ಸಿಬ್ಬಂದಿ ಹಾಗೂ ಪೊಲೀಸರು ಅನೇಕರನ್ನು ರಕ್ಷಿಸಿದ್ದಾರೆ.