ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪ ಆಧಾರದಲ್ಲಿ 58 ಜನರಿಗೆ ಉದ್ಯೋಗ ನೀಡಲಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಐವರಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಕಾಯುತ್ತಿದ್ದ 58 ಅಭ್ಯರ್ಥಿಗಳಿಗೆ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತಿದ್ದು, ಅದರಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.
ನೇಮಕಗೊಂಡ ಪ್ರಮುಖರು :
ರೇಖಾ ಆರ್ ಪರಾಂಡೆ ಕೋಂ (ಪತ್ನಿ) ದಿವಂಗತ ರಾಯಪ್ಪ ಬಿ ಪರಾಂಡೆ ಚಾಲಕ / ನಿರ್ವಾಹಕ ಬಾಗಲಕೋಟೆ ವಿಭಾಗ
ಸುಮಾಬಾಯಿ ಕೋಂ (ಪತ್ನಿ) ದಿವಂಗತ. ಶೇಖರನಾಯ್ಕ ಕೆ. ಎಂ ಚಾಲಕ ಹಾವೇರಿ ವಿಭಾಗ
ರೂಪ ಡಿ ಮಾಯಣ್ಣವರ ಕೋಂ (ಪತ್ನಿ) ದಿವಂಗತ. ದಾನಪ್ಪ ಮಾಯಣ್ಣವರ ಚಾಲಕ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ
ಮೊಹಮ್ಮದ್ ಫಾರೂಕ್ ಎಂ ಕೆಳಗಡೆ ಬಿನ್ (ಮಗ) ದಿವಂಗತ ಮೊಹಮ್ಮದ್ ಗೌಸ್ ಹೆಚ್ ಕೆಳಗಡೆ ಚಾಲಕ ಹಾವೇರಿ ವಿಭಾಗ
ಮಂಜುನಾಥ ಎಂ ತಿಗಡಿ ಬಿನ್ (ಮಗ) ದಿವಂಗತ. ಮಾರುತಿ ಎಸ್ ತಿಗಡಿ ಚಾಲಕ ನಿರ್ವಾಹಕ/ ಧಾರವಾಡ ವಿಭಾಗ
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್ ಭರತ್ ಉಪಸ್ಥಿತರಿದ್ದರು.






















































ನೇಮಕಗೊಂಡ ಪ್ರಮುಖರು :