ಬೆಂಗಳೂರು: ಕೊರೋನಾ ಸೋಂಕು ತಡೆಯಲು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಬಗ್ಗೆ ಪ್ರತಿ ಪಕ್ಷ ಕಾಂಗ್ರೆಸ್ ಅಸಮಾಧಾನ ಹೊರಹಾಕಿದೆ. ಇದು ಪಲಾಯನವಾದದ ನಡೆಯೇ ಹೊರತು ಸೋಂಕು ನಿಯಂತ್ರಣದ ಕ್ರಮವಲ್ಲ ಎಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ರಮೇಶ್ ಬಾಬು ಕಟು ಟೀಕೆ ಮಾಡಿದ್ದಾರೆ.
ಮೇ10ರಿಂದ 24ರ ಲಾಕ್ ಡೌನ್ ಘೋಷಣೆ ಈ ಸರ್ಕಾರದ ವೈಫಲ್ಯ ಪಲಾಯನವಾದ ಎಂದು ರಮೇಶ್ ಬಾಬು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಗಳೇ ಜನರಿಗೆ ಔಷಧ ಆಸ್ಪತ್ರೆ ಆಕ್ಸಿಜನ್ ಹಾಸಿಗೆ ಬಗ್ಗೆ ಚಕಾರ ಎತ್ತದೆ, ನಮ್ಮ ಕೈಲಿ ಇಲ್ಲ ಎಂದು ಅಸಹಾಯಕತೆ ತೋರಿದ್ದಾರೆ. ಈ ಲಾಕ್ ಡೌನ್ ಕೋವಿಡ್ ತಡೆಯುವ ಪ್ರಾಣಹಾನಿ ತಡೆಯುವ ಪ್ರಯತ್ನ ಅಲ್ಲ ಎಂದು ರಮೇಶ್ ಬಾಬು ವ್ಯಾಖ್ಯಾನಿಸಿದ್ದಾರೆ.
ಮೇ10ರಿಂದ 24ರ ಲಾಕ್ ಡೌನ್ ಘೋಷಣೆ ಈ ಸರ್ಕಾರದ ವೈಫಲ್ಯ ಪಲಾಯನವಾದ
ಮುಖ್ಯಮಂತ್ರಿಗಳೇ ಜನರಿಗೆ ಔಷಧ ಆಸ್ಪತ್ರೆ ಆಕ್ಸಿಜನ್ ಹಾಸಿಗೆ ಬಗ್ಗೆ ಚಕಾರ ಎತ್ತದೆ ನಮ್ಮ ಕೈಲಿ ಇಲ್ಲ ಎಂದು ಅಸಹಾಯಕತೆ ತೋರಿದ್ದಾರೆ
ಈ ಲಾಕ್ ಡೌನ್ ಕೋವಿಡ್ ತಡೆಯುವ ಪ್ರಾಣಹಾನಿ ತಡೆಯುವ ಪ್ರಯತ್ನ ಅಲ್ಲ
ಸರ್ಕಾರದ ವೈಫಲ್ಯಕ್ಕೆ ಧಿಕ್ಕಾರ#bjp #bbmp #cm #congress #ItCell— Ramesh Babu (@rameshbabuexmlc) May 7, 2021