ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ಜನಜೀವನ ತತ್ತರಗೊಂಡಿದೆ. ಸೋಂಕಿನಿಂದಾಗಿ ಮಾರಣಹೋಮವೇ ನಡೆಯುತ್ತಿದ್ದು ಲಾಕ್‌ಡೌನ್ ಜಾರಿಗೊಳಿಸುವಂತೆ ಸಾಕಷ್ಟು ಸಲಹೆಗಳು ವ್ಯಕ್ತವಾಗಿವೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿರುವ ಸಿಎಂ ಯಡಿಯೂರಪ್ಪ ಅವರು 14 ದಿನ ಪರಿಪೂರ್ಣ ಲಾಕ್‌ಡೌನ್ ರೀತಿಯ ಕಠಿಣ ನಿಯಮವನ್ನು ಘೋಷಿಸಿದ್ದಾರೆ. ಮೇ 10 ರಿಂದ 14 ದಿನ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದಾರೆ.
ಅಂಗಡಿ ಮುಂಗಟ್ಟು ಬಂದ್. ಅಗತ್ಯ ವಸ್ತುಗಳಿಗಷ್ಟೇ ಅವಕಾಶ. ಇದಕ್ಕೆ ಬೆಳಿಗ್ಗೆ 10 ಗಂಟೆವರೆಗಷ್ಟೇ ಅವಕಾಶ ಕಲ್ಲಿಸಲಾಗಿದೆ. ಹಾಲು ಮಾರಾಟ, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡಲು ಸಂಜೆ 6 ಗಂಟೆವರೆಗೂ ಅವಕಾಶ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಹೊಸ ಮಾರ್ಗಸೂಚಿಯಂತೆ ರಾಜ್ಯಾದ್ಯಂತ ಹೊಟೇಲ್, ಪಬ್, ಬಾರ್ ಬಂದ್. ಜನರ ಅನಗತ್ಯ ಓಡಾಟ ನಿರ್ಬಂಧಿಸಲಾಗಿದೆ. ಹೊಟೇಲ್, ಬಾರ್, ರೆಸ್ಟೋರೆಂಟ್ ಗಳಿಂದ ಪಾರ್ಸೆಲ್ ಪಡೆಯಬಹುದು. ಆದರೆ ವಾಹನಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗುವಂತಿಲ್ಲ.
ಅಂತಾರಾಜ್ಯ ವಾಹನ ಸಂಚಾರ ನಿಷೇಧ. ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ದಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ಮದುವೆ ಸಮಾರಂಭಗಳಿಗೆ 50 ಜನರಷ್ಟೇ ಭಾಗವಹಿಸಲು ಅವಕಾಶ.
ಕೃಷಿ ಚಟುವಟಿಕೆ, ಕಟ್ಟಡ ಕಾಮಗಾರಿಗೆ ಅಡ್ಡಿ ಇಲ್ಲ.
ಪ್ರಸ್ತುತ ಲಾಕ್‌ಡೌನ್ ರೀತಿ ಟಫ್ ರೂಲ್ಸ್ ಮೇ 12ರ ವರೆಗೆ ಜಾರಿಯಲ್ಲಿರುತ್ತದೆ. ಆದರೆ ಈ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಫಲ ನೀಡದ ಕಾರಣದಿಂದಾಗಿ ಮೇ 10ರಿಂದಲೇ ಮತ್ತಷ್ಟು ಕಠಿಣ ನಿಯಮಾವಳಿಗಳನ್ನು ಘೋಷಿಸಲು ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಲಾಯಿತು. ಅದರಂತೆ ಮೇ 24ರವರೆಗೆ ಜಾರಿಗೆ ಬರುವಂತರ ಈ ಹೊಸ ಮಾರ್ಗಸೂಚಿಯನ್ನು ಸಿಎಂ ಘೋಷಿಸಿದ್ದಾರೆ.