ಬೆಂಗಳೂರು: ಕೊರೋನಾ ವೈರಾಣು ಸೋಂಕಿನ ಉಲ್ಬಣ ಹಾಗೂ ಒಮಿಕ್ರಾನ್ ವಕ್ಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿಯಮ ಘೋಷಿಸಲಾಗಿದೆ. ಡಿಸೆಂಬರ್ 28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಬೆಂಗಳೂರಿನಲ್ಲಿಂದು ಸಿಎಂ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ., ರಾಜ್ಯಾದ್ಯಂತ ರಾತ್ರಿ 10ರಿಂದ ಮುಂಜಾನೆ 5ಗಂಟೆವರೆಗೆ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ಹೊಟೇಲ್, ಪಬ್, ಬಾರ್‌ಗಳಲ್ಲಿ ಶೇ.50 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಭೆ, ಸಮಾರಂಗಳಲ್ಲೂ ಶೇ.50 ಮಂದಿಗೆ ಅವಕಾಶ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಇವುಗಳಿಗಿಲ್ಲ ಅಡ್ಡಿ..
- ಹೋಟೆಲ್, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್ಗಳಲ್ಲಿ 50:50 ನಿಮಯ ಜಾರಿಗೊಳಿಸಲಾಗಿದೆ. ಈ ನಿಯಮ ಹಗಲಲ್ಲೂ ಅನ್ವಯವಾಗುತ್ತದೆ.
- 50:50 ರೂಲ್ಸ್ ಹೋಟೆಲ್, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್ ಹೊರತುಪಡಿಸಿ ಬೇರೆ ಕ್ಷೇತ್ರಗಳಿಗೆ ಅನ್ವಯವಾಗಲ್ಲ ಎಂದು ಸುಧಾಕರ್ ಹೇಳಿದ್ದಾರೆ.
- ನೈಟ್ ಕರ್ಫ್ಯೂ ವೇಳೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಲಿವೆ.
- ಸಭೆ, ಮದುವೆ ಸಮಾರಂಭಗಳಲ್ಲಿ 300 ಜನರಿಗೆ ಮಾತ್ರ ಅವಕಾಶ.
- ನೈಟ್ ಕರ್ಫ್ಯೂ ವೇಳೆ ತುರ್ತು ಸೇವೆಗಳಲ್ಲಿ ಯಾವುದೇ ವ್ಯತ್ಯಯವಿಲ್ಲ.
- ರಾತ್ರಿ ಪಾಳಿಯಲ್ಲಿ ದುಡಿಯುವ ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯವಾಗಿದೆ.
- ಸರಕು-ಸಾಗಣೆ ವಾಹನಗಳಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ.
- ಹೋಮ್ ಡೆಲಿವರಿ, ಆನ್ಲೈನ್ ಡೆಲಿವರಿಗೆ ನಿರ್ಬಂಧವಿಲ್ಲ.
- ರೈಲು, ಬಸ್, ವಿಮಾನ ಸಂಚಾರದಲ್ಲಿಯೂ ವ್ಯತ್ಯಯವಿರಲ್ಲ. ಪ್ರಯಾಣಿಕರು ಟಿಕೆಟ್ ತೋರಿಸಿ ಓಡಾಡುವುದಕ್ಕೆ ಅನುಮತಿ ಇದೆ.