ದೆಹಲಿ; ಭಾರತದಲ್ಲೂ ಬ್ರಿಟನ್ ರೂಪಾಂತರಿ ಕೊರೋನಾ ವೈರಾಣು ತಲ್ಲಣ ಸೃಷ್ಟಿಸಿದೆ. ಕೊರೋನಾ ವೈರಾಣುಗಿಂತಲೂ ಭಯಾನಕತೆಗೆ ಕೊಂಡೊಯ್ಯುವ ರೂಪಾಂತರಿ ಪ್ರಬೇಧ ಮಂಗಳವಾರ 10 ಮಂದಿಯಲ್ಲಿ ದೃಢಪಟ್ಟಿತ್ತು. ಈ ಸಂಖ್ಯೆ ಇಂದು ಬೆಳಗಾಗುವಷ್ಟರಲ್ಲಿ 20 ಕ್ಕೆ ಏರಿಕೆಯಾಗಿದೆ.
ಕೇವಲ ಬ್ರಿಟನ್’ನಿಂದ ಬಂದವರಷ್ಟೇ ಅಲ್ಲ, ಅವರನ್ನು ಸಂಪರ್ಕಿಸಿದವರಲ್ಲೂ ಈ ವೈರಾಣು ಸೋಂಕು ಕಂಡು ಬಂದಿದೆ. ದೆಹಲಿಯಲ್ಲಿ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲಿ 7 ಮಂದಿ ಈ ಹೊಸ ಪ್ರಬೇಧದ ವೈರಾಣು ಸೋಂಕಿನಿಂದ ಬಳಲುತ್ತಿದ್ದಾರೆ ಎಂಬ ಅಂಕಿ ಅಂಶ ಸಿಕ್ಕಿದೆ.
ಕರ್ನಾಟಕದಲ್ಲೂ ಮಂಗಳವಾರ 3 ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಈ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.