ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಧೃವತಾರೆಯಾಗಿ ಮಿಂಚಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯನ್ನು ಇಂದು ಅಭಿಮಾನಿಗಳು ಶ್ರದ್ದೆ, ಗೌರವಗಳಿಂದ ಆಚರಿಸುತ್ತಿದ್ದಾರೆ. ಈ ಮೂಲಕ ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದಾರೆ.
ಬಹುಭಾಷಾ ತಾರೆಯಾಗಿ ಕಲಾ ರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಡಾ. ವಿಷ್ಣುವರ್ಧನ್ ಅವರ ಕಲಾ ಪ್ರೌಢಿಮೆ, ನಟನಾ ಶ್ರೀಮಂತಿಕೆ ಹಾಗೂ ಸರ್ವಶ್ರೇಷ್ಠ ವ್ಯಕ್ತಿತ್ವದ ಪ್ರಭಾವ ಸದಾ ಜೀವಂತವಾಗಿದೆ.
ಈ ಶ್ರೇಷ್ಠ ಕಲಾವಿದನನ್ನು ಸ್ಮರಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಾಮಾಜಿಕ ಸಂದೇಶಗಳನ್ನು ಸಾರುವ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ರಾಜ್ಯದ ಜನಮನಗೆದ್ದ ಡಾ. ವಿಷ್ಣುವರ್ಧನ್ ಅವರು ಇಂದಿಗೂ ನಮ್ಮ ಮನೆ, ಮನದಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದ್ದಾರೆ. ಡಾ. ವಿಷ್ಣುವರ್ಧನ್ ಅವರ 11 ನೇ ಪುಣ್ಯಸ್ಮರಣೆ ಯ ಈ ದಿನ ಅವರ ಪಾದಪದ್ಮಗಳಿಗೆ ಪ್ರಣಾಮಗಳು ಎಂದು ಅವರು ಹೇಳಿದ್ದಾರೆ.