ಮುಂಬೈ: ದೇಶದಲ್ಲಿ ಮತ್ತೊಮ್ಮೆ ಕೊರೋನಾ ತಲ್ಲಣ ಸೃಷ್ಟಿಯಾಗಿದೆ. ಅದರಲ್ಲೂ
ಮಹಾರಾಷ್ಟ್ರದಲ್ಲಿ ಸುಮಾರು ಐದು ತಿಂಗಳ ನಂತರ ಭಾನುವಾರ ಮತ್ತೆ ಅತ್ಯಧಿಕ ಸಂಖ್ಯೆಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ.
ಶನಿವಾರ ಸಂಜೆಯಿಂದ ಭಾನುವಾರದ ನಡುವೆ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 11,141 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.
ಈ ಆತಂಕಕಾರಿ ಬೆಳವಣಿಗೆಯು ಕೋವಿಡ್‌ನ ಎರಡನೇ ಅಲೆ ಶುರುವಾದಂತಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 22,19,727ಕ್ಕೆ ಏರಿಕೆಯಾಗಿದೆ.
ಮುಂಬೈ ನಗರದಲ್ಲಿ 1,361 ಹಾಗೂ ನಾಗಪುರದಲ್ಲಿ 1,073 ಹೊಸದಾಗಿ ಸೋಂಕಿನ ಪ್ರಕರಣ ಪತ್ತೆಯಾಗಿವೆ. ಅಷ್ಟೇ ಅಲ್ಲ ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಒಂದೇ ದಿನದಲ್ಲಿ ಕೊರೋನಾಗೆ 38 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 52,478ಕ್ಕೆ ಏರಿಕೆಯಾಗಿದೆ.
ಈ ನಡುವೆ, ಸೋಂಕಿನ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ನಿರ್ಧರಿಸಿದೆ.