ಬೆಂಗಳೂರು: ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಲಷ್ಕರ್ ಎ ತೊಯ್ಬಾ ನಂಟು ಹೊಂದಿದ್ದಾರೆನ್ನಲಾದ ಎಂಟು ಶಂಕಿತರ ವಿರುದ್ಧ ರಾಷ್ಟ್ರೀಯ ತನಿಖಾ ದಳವು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದೆ.
ರಾಜಧಾನಿ ಬೆಂಗಳೂರು ಸಹಿತ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸಿರುವ ಅನುಮಾನದ ಮೇಲೆ ಕಳೆದ ಜುಲೈನಲ್ಲಿ ಪೊಲೀಸರು ಐವರು ಶಂಕಿತರನ್ನು ಉಗ್ರರನ್ನು ಬಂಧಿಸಿದ್ದ, ಏಳು ನಾಡ ಪಿಸ್ತೂಲುಗಳು, 45 ಜೀವಂತ ಗುಂಡುಗಳು, ವಾಕಿಟಾಕಿಗಳು, ಡ್ರಾಗರ್ಗಳು ಮತ್ತು 12 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಸುದೀರ್ಘ ತನಿಖೆ ಕೈಗೊಂಡ ರಾಷ್ಟ್ರೀಯ ತನಿಖಾ ದಳ, ಇದೀಗ ಎಂಟು ಶಂಕಿತರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದೆ. ಈ 8 ಮಂದಿಯಲ್ಲಿ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇಬ್ಬರು ಉಗ್ರರು ತಲೆ ಮರೆಸಿಕೊಂಡಿದ್ದಾರೆ ಎಂದು NIA ತನಿಖಾಧಿಕಾರಿಗಳು ನ್ಯಾಯಾಲಯದ ಗಮನಸೆಳೆದಿದ್ದಾರೆ.