ನೆಲಮಂಗಲ: ರಾಜಧಾನಿ ಸೆರಗಿನಲ್ಲಿ ದೇವರ ಗುಡಿಗಳಿಗೂ ಅಪಚಾರ ಮಾಡುವ ಖದೀಮರಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಕಿಡಿಗೇಡಿಗಳು ದೇವಾಲಯಕ್ಕೆ ಬೆಂಕಿ ಹಚ್ಚಿ ಪುಂಡಾಟ ಪ್ರದರ್ಶಿಸಿದ್ದಾರೆ.
ನೆಲಮಂಗಲದ ಸರ್ಕಲ್ ಆಂಜನೇಯ ದೇವಾಲಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರ ಬಳಿ, ರಾಷ್ಟ್ರೀಯ ಹೆದ್ದಾರಿ ಜಾಸ್ ಟೋಲ್ ಬಳಿಯಿಂದ ಕೂಗಳತೆ ದೂರದಲ್ಲಿರುವ ದೇವಾಲಯಕ್ಕೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ್ದಾರೆ.
ದೇವರ ವಿಗ್ರಹಕ್ಕೂ ಬೆಂಕಿ ಹಚ್ಚಿ ಹೀನ ಕೃತ್ಯ ಎಸಗಿದ್ದು ಘಟನೆ ಖಂಡಿಸಿ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು ಕೃತ್ಯ ಎಸಗಿದವರ ಪತ್ತೆಗೆ ಬಲೆ ಬೀಸಿದ್ದಾರೆ.