ನೀವು ದೇವರನ್ನು ನೋಡಿದ್ದೀರ? ಇದೀಗ ದೇವರ ಹಸ್ತ ಕಂಡ ಬಗ್ಗೆ ಜಗತ್ತಿನಾದ್ಯಂತ ಚರ್ಚೆಗಳು ಸಾಗಿವೆ. ಏನಿದು ಅಚ್ಚರಿ ಹಾಗೂ ಕುತೂಹಲ ಅಂತೀರ?
ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇಂಥದ್ದೊಂದು ಕುತೂಹಲಕಾರಿ ಚರ್ಚೆಗೆ ಮುನ್ನುಡಿ ಬರೆದಿದೆ.
ಬಾಹ್ಯಾಕಾಶದಲ್ಲಿನ ವಿಸ್ಮಯ ಕುರಿತಂತೆ ನಾಸಾ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಅಪ್ಲೋಡ್ ಮಾಡಿದೆ. ಹಸ್ತದ ರೀತಿ ಬಾನಂಗಳದಲ್ಲಿ ಕಿರಣಗಳು ಚೆಲ್ಲಿದ ರೀತಿಯಲ್ಲಿರುವ ಫೊಟೋ ಇದಾಗಿದೆ. ಇದನ್ನು ನೆಟ್ಟಿಗರು ‘hand of god’ ಎಂದು ಬಣ್ಣಿಸಿದ್ದಾರೆ.
View this post on Instagram
ಅಗೋಚರ ಶಕ್ತಿಯೊಂದು ಆಶೀರ್ವಾದ ಮಾಡಿದ ರೀತಿ ಇದು ಕಂಡು ಬರುತ್ತಿದ್ದು, ‘ಇದು ಭಗವಂತನ ಹಸ್ತ’ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.
ಇದು ಸೂಪರ್‌ನೋವಾ ಬ್ಲಾಸ್ಟ್ ಸಂದರ್ಭದಲ್ಲಿ ನಕ್ಷತ್ರ ಛಿದ್ರಗೊಂಡ ಸನ್ನಿವೇಶವಾಗಿದೆ ಎಂದು ನಾಸಾ ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದರೆ ಆ ಹೊತ್ತಿಗಾಗಲೇ ಜನ ‘ಭಗವಂತ’ನ ಕುರಿತು ಅಂಟಿಕೊಂಡಿದ್ದು, ವೈಜ್ಞಾನಿಕ ಸತ್ಯವನ್ನು ಸ್ವೀಕರಿಸಲು ತಯಾರಿಲ್ಲ ಎಂಬಂತಿದೆ.