ದೆಹಲಿ: ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ‘ನಮೋ ಸಮಾಜ್’ನ ದಕ್ಷಿಣ ಭಾರತ ಪ್ರಮುಖ್ ಅನಿಲ್ ಕುಮಾರ್ ಜಿ.ಆರ್. ಅವರಿಗೆ ಜೀವ ಬೆದರಿಕೆಯ ಪಿತೂರಿ ನಡೆದಿದೆ ಎಂಬ ವರದಿ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ್ ಕುಮಾರ್ ಅವರು ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳನ್ನು ಬಯಲಿಗೆಳೆದಿದ್ದು ಈ ಹಿಂದೆಯೂ ಕೊಲೆ ಬೆದರಿಕೆಯ ಸಂಚು ನಡೆದಿತ್ತೆನ್ನಲಾಗಿದೆ. ಆರೆಸ್ಸೆಸ್ ಸಂಘಟನೆಯ ರಾಷ್ಟ್ರೀಯ ಪ್ರಮುಖರಿಗೂ ಆಪ್ತರಾಗಿರುವ ಅನಿಲ್ ಕುಮಾರ್ ಅವರ ವಿರುದ್ದ ನಡೆದಿರುವ ಪಿತೂರಿ ಕುರಿತಂತೆ ಸಂಘದ ರಾಷ್ಟ್ರೀಯ ಪ್ರಮುಖರು ಅಮಿತ್ ಷಾ ಜೊತೆ ಚರ್ಚಿಸಿದ್ದು ಅವರಿಗೆ ಸೂಕ್ತ ಭದ್ರತೆ ನೀಡುವ ಬಗ್ಗೆ ಸಲಹೆ ನೀಡಿದ್ದಾರೆ.
ಈ ನಡುವೆ ಅಮಿತ್ ಷಾ ಕಚೇರಿಯ ಅಧಿಕಾರಿಗಳು ಅನಿಲ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರಕರಣ ಕುರಿತಂತೆ ಮಾಹಿತಿ ಪಡೆದಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ರಾಜ್ಯದ ಗೃಹಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೂ ಪತ್ರ ವಿನಿಮಯವಾಗಿದ್ದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯಲ್ಲೂ ಈ ಪ್ರಕರಣ ಸಂಚಲನ ಸೃಷ್ಟಿಸಿದೆ.