ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಧ್ವನಿಗೆ ಹೋಲುವ ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಪಕ್ಷದ ‘ಮೀರ್ ಸಾದಿಕ್’ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷದ ಮಹಾನಾಯಕನ ವಿರುದ್ದ ಪಿತೂರಿ ಮಾಡುತ್ತಿರುವ ‘ಮೀರ್ ಸಾದಿಕ್’ ಅವರೇ ಆ ಪಕ್ಷದ ವರಿಷ್ಠ ನಾಯಕಿಯ ಮನವೊಲಿಸಲು ಈ ನಕಲಿ ಆಡಿಯೋ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ದೂರಿದೆ.
ಆಡಿಯೋ ಮೂಲಕ ನಳಿನ್ ಕುಮಾರ್ ಅವರು ಸಿಎಂ ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್ ವಿರುದ್ದ ಪಿತೂರಿ ನಡೆಸಿದ್ದಾರೆಂದೂ, ಈ ಕಾರಣಕ್ಕಾಗಿ ನಳಿನ್ ಕುಮಾರ್ ಅವರನ್ನು ‘ಮೀರ್ ಸಾದಿಕ್’ ಎಂದೂ ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ಟೀಕಿಸಿದೆ. ಇದಕ್ಕೆ ಪ್ರತಿ ಟ್ವೀಟ್ ಮೂಲಕ ಕಾಂಗ್ರೆಸ್‌ನ ಹಲವು ಬೆಳವಣಿಗೆಗಳತ್ತ ಬೊಟ್ಟು ಮಾಡಿರುವ ಬಿಜೆಪಿ, ‘ಕೈ’ ಪಕ್ಷದ ಮೀರ್ ಸಾದಿಕ್ ಅವರೇ ನಳಿನ್ ಧ್ವನಿಯ ಆಡಿಯೋ ಹಿಂದಿನ ಶಕ್ತಿ ಎಂದು ಆರೋಪಿಸಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನಳಿನ್ ಕುಮಾರ್ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ಎಂದು ಪ್ರಶ್ನಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ?
ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ?#ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021
ಮಹಾನಾಯಕನ ವಿರುದ್ಧ ತೊಡೆ ತಟ್ಟುತ್ತಿರುವ ಮೀರ್ ಸಾದಿಕ್ ಈಗ ಕಾಂಗ್ರೆಸ್ ಮಹಾನಾಯಕಿಯ ಮೆಚ್ಚುಗೆ ಪಡೆಯಲು ಕುತಂತ್ರದ ಮೊರೆ ಹೋಗಿದ್ದಾರೆ. ಮಹಾನಾಯಕನ ಮಟ್ಟ ಹಾಕುವುದಕ್ಕೆ ಸೆಟೆದು ನಿಂತಿರುವ ಮೀರ್ ಸಾದಿಕ್ ದೆಹಲಿ ಪ್ರವಾಸದ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದೆ.
ಮಹಾನಾಯಕನ ವಿರುದ್ಧ ತೊಡೆ ತಟ್ಟುತ್ತಿರುವ ಮೀರ್ ಸಾದಿಕ್ ಈಗ ಕಾಂಗ್ರೆಸ್ ಮಹಾನಾಯಕಿಯ ಮೆಚ್ಚುಗೆ ಪಡೆಯಲು ಕುತಂತ್ರದ ಮೊರೆ ಹೋಗಿದ್ದಾರೆ.
ಮಹಾನಾಯಕನ ಮಟ್ಟ ಹಾಕುವುದಕ್ಕೆ ಸೆಟೆದು ನಿಂತಿರುವ ಮೀರ್ ಸಾದಿಕ್ ದೆಹಲಿ ಪ್ರವಾಸದ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ.#ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021
ಕಾಂಗ್ರೆಸ್ ಪಕ್ಷದಲ್ಲಿರುವ ಈ ಮೀರ್ ಸಾದಿಕ್ ಯಾರ ವಿರುದ್ಧ ಬೇಕಾದರೂ ಸಂಚು ರೂಪಿಸಬಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ದಲಿತ ನಾಯಕ ಪರಮೇಶ್ವರ್ ಅವರನ್ನು ಮೋಸದಿಂದ ಸೋಲಿಸಿದ ಈ ವ್ಯಕ್ತಿಯ ಮೀರ್ ಸಾದಿಕತನ ಎಲ್ಲಿ ಹೋಗುತ್ತದೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಈ ಮೀರ್ ಸಾದಿಕ್ ಯಾರ ವಿರುದ್ಧ ಬೇಕಾದರೂ ಸಂಚು ರೂಪಿಸಬಲ್ಲ.
2013 ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ದಲಿತ ನಾಯಕ ಪರಮೇಶ್ವರ್ ಅವರನ್ನು ಮೋಸದಿಂದ ಸೋಲಿಸಿದ ಈ ವ್ಯಕ್ತಿಯ ಮೀರ್ ಸಾದಿಕತನ ಎಲ್ಲಿ ಹೋಗುತ್ತದೆ?#ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021
ನಕಲಿ ದಾಖಲೆ ಸೃಷ್ಟಿಸುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ. ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ. ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು ಎಂದು ಹೇಳಲಾಗಿದೆ.
ನಕಲಿ ದಾಖಲೆ ಸೃಷ್ಟಿಸುವವರಿಗೆ @INCKarnataka ಪಕ್ಷದಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ.
ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ.
ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು.#ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021
ಹೋರಾಟವಿಲ್ಲದೆ ಹುದ್ದೆ ಬಯಕೆ, ಕದ್ದ ವಾಚು ಧರಿಸಿ ಶೋಕಿ ಮೆರೆಯುವಿಕೆ, ಮಿಮಿಕ್ರಿ ಕಲಾವಿದರ ಮೂಲಕ ನಕಲಿ ಆಡಿಯೋ ತಯಾರಿಕೆ. ಮೀರ್ ಸಾದಿಕ್ ಸೃಷ್ಟಿಸುವ ಕಪಟ ನಾಟಕಗಳು ಒಂದೋ ಎರಡೋ!? ಚಾಮರಾಜಪೇಟೆಯ ಡಕೋಟಾ ಗಾಡಿ ಡ್ರೈವರ್‌ನಂತಹ ಶಿಷ್ಯರಿಗೆ ತಾನು ತಕ್ಕ ಗುರು ಎಂದು ಮೀರ್ ಸಾದಿಕ್ ಸಾಬೀತು ಪಡಿಸಿದ್ದಾರೆ ಎಂದು ಬಿಜೆಪಿ ಕುಟುಕಿದೆ.
ಹೋರಾಟವಿಲ್ಲದೆ ಹುದ್ದೆ ಬಯಕೆ, ಕದ್ದ ವಾಚು ಧರಿಸಿ ಶೋಕಿ ಮೆರೆಯುವಿಕೆ, ಮಿಮಿಕ್ರಿ ಕಲಾವಿದರ ಮೂಲಕ ನಕಲಿ ಆಡಿಯೋ ತಯಾರಿಕೆ. ಮೀರ್ ಸಾದಿಕ್ ಸೃಷ್ಟಿಸುವ ಕಪಟ ನಾಟಕಗಳು ಒಂದೋ ಎರಡೋ!?
ಚಾಮರಾಜಪೇಟೆಯ ಡಕೋಟಾ ಗಾಡಿ ಡ್ರೈವರ್‌ನಂತಹ ಶಿಷ್ಯರಿಗೆ ತಾನು ತಕ್ಕ ಗುರು ಎಂದು ಮೀರ್ ಸಾದಿಕ್ ಸಾಬೀತು ಪಡಿಸಿದ್ದಾರೆ.#ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021
ನಕಲಿ ಆಡಿಯೋ, ವಿಡಿಯೋ ಸೃಷ್ಟಿಯಲ್ಲಿ ಕರ್ನಾಟಕದ ಮೀರ್ ಸಾದಿಕ್ ಅವರದ್ದು ಎತ್ತಿದ ಕೈ. ಲೋಕಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪೃಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಡಿಯೋ ತಯಾರಿಸಿ ನಂತರ ಇದು ನಕಲಿ ಎಂದ ಘನ ಇತಿಹಾಸ ಈ ಮೀರ್ ಸಾದಿಕ್‌ನದ್ದಾಗಿದೆ ಎಂಬ ಸಂಗತಿಯ ಉಲ್ಲೇಖವೂ ಗಮನಸೆಳೆದಿದೆ.
ನಕಲಿ ಆಡಿಯೋ, ವಿಡಿಯೋ ಸೃಷ್ಟಿಯಲ್ಲಿ ಕರ್ನಾಟಕದ ಮೀರ್ ಸಾದಿಕ್ ಅವರದ್ದು ಎತ್ತಿದ ಕೈ.
ಲೋಕಸಭಾ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪೃಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಡಿಯೋ ತಯಾರಿಸಿ ನಂತರ ಇದು ನಕಲಿ ಎಂದ ಘನ ಇತಿಹಾಸ ಈ ಮೀರ್ ಸಾದಿಕ್‌ನದ್ದಾಗಿದೆ.#ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021
ಮಹಾನಾಯಕನ ಸುತ್ತ ಐದು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಂಡಿದ್ದು ಮೀರ್ ಸಾದಿಕ್‌ನ ತಂತ್ರದ ಒಂದು ಭಾಗ. ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವುದರಲ್ಲೇ ನೆಮ್ಮದಿ ಕಾಣುತ್ತಿರುವ ಮಹಾನಾಯಕನಿಗೆ ಉಡಿಯಲ್ಲಿ ಮೀರ್ ಸಾದಿಕ್‌ನಂತಹ ಕೆಂಡ ಕಟ್ಟಿಕೊಂಡಿರುವ ಬಗ್ಗೆ ಅರಿವಿಲ್ಲ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬೊಟ್ಟು ಮಾಡಲಾಗಿದೆ.
ಮಹಾನಾಯಕನ ಸುತ್ತ ಐದು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಂಡಿದ್ದು ಮೀರ್ ಸಾದಿಕ್‌ನ ತಂತ್ರದ ಒಂದು ಭಾಗ.
ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವುದರಲ್ಲೇ ನೆಮ್ಮದಿ ಕಾಣುತ್ತಿರುವ ಮಹಾನಾಯಕನಿಗೆ ಉಡಿಯಲ್ಲಿ ಮೀರ್ ಸಾದಿಕ್‌ನಂತಹ ಕೆಂಡ ಕಟ್ಟಿಕೊಂಡಿರುವ ಬಗ್ಗೆ ಅರಿವಿಲ್ಲ. #ಮಹಾನಾಯಕVsಮೀರ್‌ಸಾದಿಕ್
— BJP Karnataka (@BJP4Karnataka) July 19, 2021