ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಳಿನ್ ಕುಮಾರ್ ಕಟೀಲ್ ಧ್ವನಿಯನ್ನು ಹೋಲುವ ಆಡಿಯೋ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಆಡಿಯೋ ತನ್ನದಲ್ಲ, ನಕಲಿ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರಾದರೂ ಕಾಂಗ್ರೆಸ್ ಪಕ್ಷದ ಪ್ರಮುಖರು ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದು ಹೇಳುತ್ತಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವೈರಲ್ ಆಗಿರುವುದು ನಳಿನ್ ಕುಮಾರ್ ಕಟೀಲ್ ಅವರದ್ದೇ ಧ್ವನಿ. ಅವರ ಆಡಿಯೋವನ್ನು ನಕಲಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಏನೇ ಹೇಳಿದರೂ ರಾಜ್ಯದ ಜನರಿಗೆ ಸತ್ಯ ಗೊತ್ತಿದೆ ಎಂದು ಡಿಕೆಶಿ ಹೇಳಿದರು.
ದೂರವಾಣಿ ಕದ್ದಾಲಿಕೆ? ಏನಿದು ‘ಕೈ’ ಬಾಂಬ್..?
ಇನ್ನೊಂದೆಡೆ, ಇದು ದೂರವಾಣಿ ಕದ್ದಾಲಿಕೆ ಮೂಲಕ ಬಯಲಾಗಿರುವ ಆಡಿಯೋ ಎಂದು ಪ್ರದೇಶ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಸಂಚಲನ ಸೃಷ್ಟಿಸಿದೆ.
ಆಡಳಿತದಲ್ಲಿ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಬಿಜೆಪಿಗರೇ ಆರೋಪಿಸಿದ್ದರು. ಕಟೀಲ್ ಆಡಿಯೋ ಬಿಡುಗಡೆಯ ಮೂಲಕ ಅದು ಸಾಬೀತಾಯಿತು. ಬಿನ್ನಮತದ ಹೇಳಿಕೆ ನೀಡಿದವರ ವಿರುದ್ಧ ಪಕ್ಷದ ಅಧ್ಯಕ್ಷನಾಗಿ ಕ್ರಮ ಕೈಗೊಳ್ಳದೆ ಇರುವುದರಿಂದ ಇದರ ಹಿಂದಿರುವುದು ಕಟೀಲ್ ಅವರೇ ಎಂಬ ಗುಮಾನಿ ಇತ್ತು, ಈಗ ಅಡಿಯೋದಿಂದ ಬಯಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
'@BJP4Karnataka ಆಡಳಿತದಲ್ಲಿ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಬಿಜೆಪಿಗರೇ ಆರೋಪಿಸಿದ್ದರು.
ಕಟೀಲ್ ಆಡಿಯೋ ಬಿಡುಗಡೆಯ ಮೂಲಕ ಅದು ಸಾಭೀತಾಯಿತು.
ಬಿನ್ನಮತದ ಹೇಳಿಕೆ ನೀಡಿದವರ ವಿರುದ್ಧ ಪಕ್ಷದ ಅಧ್ಯಕ್ಷನಾಗಿ ಕ್ರಮ ಕೈಗೊಳ್ಳದೆ ಇರುವುದರಿಂದ ಇದರ ಹಿಂದಿರುವುದು ಕಟೀಲ್‌ಅವರೇ ಎಂಬ ಗುಮಾನಿ ಇತ್ತು, ಈಗ ಅಡಿಯೋದಿಂದ ಬಯಲಾಗಿದೆ.#BJPvsBJP
— Karnataka Congress (@INCKarnataka) July 19, 2021
ನಳಿನ್ ಕುಮಾರ್ ಕಟೀಲ್ ಅವರನ್ನು ಮೀರ್ ಸಾದಿಕ್‌ಗೆ ಹೋಲಿಸಿರುವ ಕಾಂಗ್ರೆಸ್, ನಳಿನ್ ಬಗ್ಗೆ ಯಡಿಯೂರಪ್ಪ ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರು ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ. ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ ಎಂದೂ ವಿಶ್ಲೇಷಣೆ ಮಾಡಿದೆ.
ಬಿಜೆಪಿ ಪಕ್ಷದ ಮೀರ್ ಸಾದಿಕ್ @nalinkateel ಬಗ್ಗೆ @BSYBJP ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು.
ಆದರೆ @JagadishShettar ಹಾಗೂ @ikseshwarappa ಅವರು ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ!
ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ!#BJPvsBJP
— Karnataka Congress (@INCKarnataka) July 19, 2021
ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹಾಗೂ ಈಶ್ವರಪ್ಪ ಆವರು ರಾಜಕಾರಣಕ್ಕೆ ಬಂದಾಗ ನಳಿನ್ ಕುಮಾರ್ ಕಟೀಲ್ ಗೋಲಿ ಆಡುವುದನ್ನೂ ಕಲಿತಿರಲಿಲ್ಲ. ಮಂಗಳೂರು ಬಾಗದಲ್ಲಿ ಅಬ್ಬೇಪಾರಿಯಾಗಿ ತಿರುಗುತ್ತಿದ್ದ ಕಟೀಲ್ ಇಂದು ಪಕ್ಷ ಕಟ್ಟಿದವರನ್ನೇ ಮೂಲೆಗುಂಪು ಮಾಡಲು ಸಜ್ಜಾಗಿದ್ದಾರೆ. ಬಿಜೆಪಿಯನ್ನ ಮುಳುಗಿಸಲು ಬೇರೆ ಯಾರ ಪ್ರಯತ್ನವೂ ಬೇಡ, ಕಟೀಲ್ ಒಬ್ಬರೇ ಸಾಕು ಎಂದು ಬಿಜೆಪಿಯ ವಿದ್ಯಮಾನದ ಬಗ್ಗೆ ವ್ಯಂಗ್ಯವಾಡಿದೆ.
'@BSYBJP @JagadishShettar ಹಾಗೂ @ikseshwarappa ಆವರು ರಾಜಕಾರಣಕ್ಕೆ ಬಂದಾಗ @nalinkateel ಗೋಲಿ ಆಡುವುದನ್ನೂ ಕಲಿತಿರಲಿಲ್ಲ!
ಮಂಗಳೂರು ಬಾಗದಲ್ಲಿ ಅಬ್ಬೇಪಾರಿಯಾಗಿ ತಿರುಗುತ್ತಿದ್ದ ಕಟೀಲ್ ಇಂದು ಪಕ್ಷ ಕಟ್ಟಿದವರನ್ನೇ ಮೂಲೆಗುಂಪು ಮಾಡಲು ಸಜ್ಜಾಗಿದ್ದಾರೆ.
ಬಿಜೆಪಿಯನ್ನ ಮುಳುಗಿಸಲು ಬೇರೆ ಯಾರ ಪ್ರಯತ್ನವೂ ಬೇಡ, ಕಟೀಲ್ ಒಬ್ಬರೇ ಸಾಕು
— Karnataka Congress (@INCKarnataka) July 19, 2021
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಯಡಿಯೂರಪ್ಪ ಅವರಿಗೆ ದ್ರೋಹ ಬಗೆಯುತ್ತಿರುವ ನಾಯಕತ್ವ ಬದಲಾವಣೆಯ ಸಂಚುಕೋರ ಎನ್ನುವುದು ಆಡಿಯೋದಿಂದ ಬಯಲಾಗಿದೆ. ಜೊತೆಗೆ ಶೆಟ್ಟರ್, ಈಶ್ವರಪ್ಪರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸುವ ಹುನ್ನಾರ ನಡೆದಿದೆ ಎಂದು ಕಾಂಗ್ರೆಸ್ ಹೇಳಿದೆ.
'@BJP4Karnataka ರಾಜ್ಯಾಧ್ಯಕ್ಷ @nalinkateel ಅವರೇ @BSYBJP ಅವರಿಗೆ ದ್ರೋಹ ಬಗೆಯುತ್ತಿರುವ ನಾಯಕತ್ವ ಬದಲಾವಣೆಯ ಸಂಚುಕೋರ ಎನ್ನುವುದು ಆಡಿಯೋದಿಂದ ಬಯಲಾಗಿದೆ.
ಜೊತೆಗೆ ಶೆಟ್ಟರ್, ಈಶ್ವರಪ್ಪರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸುವ ಹುನ್ನಾರ ನಡೆಸಿದ ಮೀರ್ ಸಾದಿಕ್ ಕಟೀಲ್‌ರ ಹಿಂದೆ ಇರುವುದು ಅ'ಸಂತೋಷಗೊಂಡ ವ್ಯಕ್ತಿ!#BJPvsBJP
— Karnataka Congress (@INCKarnataka) July 19, 2021
'@BSYBJP ಅವರು ಕಚೇರಿ ಸಿಬ್ಬಂಗಳಿಗೆ ಔತಣಕೂಟ ಏರ್ಪಡಿಸಿದ್ದು, @nalinkateel ನಾಯಕತ್ವ ಬದಲಾವಣೆಯ ಮಾತನಾಡಿದ್ದು ಕಾಕತಾಳಿಯವೇನಲ್ಲ.
ಇಲ್ಲಿಯವರಲ್ಲ ದಿಲ್ಲಿಯಲ್ಲಿರುವವರು ಸಿಎಂ ಆಗುತ್ತಾರೆ ಎಂದರೆ ಯಾರು @BJP4Karnataka?
ಜೋಶಿ, ಸಂತೋಷ್ ಅವರಾ ಅಥವಾ ಉತ್ತರ ಭಾರತದವರನ್ನು ಇಲ್ಲಿನ ಸಿಎಂ ಮಾಡುವಿರಾ?!#BJPvsBJP pic.twitter.com/9EHfoJahaD
— Karnataka Congress (@INCKarnataka) July 19, 2021
ಬಿಜೆಪಿ ಪಕ್ಷದವರೆಲ್ಲ ಒಮ್ಮೆಲೇ ತಮ್ಮ ಆಡಿಯೋ, ವಿಡಿಯೋಗಳನ್ನು ಒಪ್ಪುವುದಿಲ್ಲ! ರಮೇಶ್ ಜಾರಕಿಹೊಳಿ ಕೂಡ ತಮ್ಮ ವಿಡಿಯೋ ನಕಲಿ ಎಂದಿದ್ದರು, ನಂತರ ತಮ್ಮದೇ ಎಂದು ಒಪ್ಪಿಕೊಂಡರು! ಈಗ ನಳಿನ್ ಕುಮಾರ್ ಕಟೀಲ್ ಕೂಡ ತಮ್ಮದಲ್ಲ ಎನ್ನುತ್ತಿದ್ದಾರೆ, ಮುಂದೆ ಒಪ್ಪುತ್ತಾರೆ! ಇವರ ಸರ್ಕಾರದ ಫೋನ್ ಕದ್ದಾಲಿಕೆ ಬಗ್ಗೆ ಬೆಲ್ಲದ್ ಹೇಳಿರಲಿಲ್ಲವೇ ಎಂದು ನೆನಪಿಸಿಸುವ ಮೂಲಕ ಈ ವೈರಲ್ ಆಗಿರುವ ಆಡಿಯೋ ನಳಿನ್ ಅವರದ್ದೇ ಎಂದು ಕಾಂಗ್ರೆಸ್ ಹೇಳಿದೆ.
'@BJP4Karnataka ಪಕ್ಷದವರೆಲ್ಲ ಒಮ್ಮೆಲೇ ತಮ್ಮ ಆಡಿಯೋ, ವಿಡಿಯೋಗಳನ್ನು ಒಪ್ಪುವುದಿಲ್ಲ!
ರಮೇಶ್ ಜಾರಕಿಹೊಳಿ ಕೂಡ ತಮ್ಮ ವಿಡಿಯೋ ನಕಲಿ ಎಂದಿದ್ದರು, ನಂತರ ತಮ್ಮದೇ ಎಂದು ಒಪ್ಪಿಕೊಂಡರು!
ಈಗ @nalinkateel ಕೂಡ ತಮ್ಮದಲ್ಲ ಎನ್ನುತ್ತಿದ್ದಾರೆ, ಮುಂದೆ ಒಪ್ಪುತ್ತಾರೆ!
ಇವರ ಸರ್ಕಾರದ ಫೋನ್ ಕದ್ದಾಲಿಕೆ ಬಗ್ಗೆ ಬೆಲ್ಲದ್ ಹೇಳಿರಲಿಲ್ಲವೇ?!
— Karnataka Congress (@INCKarnataka) July 19, 2021
ಪ್ರಹ್ಲಾದ್ ಜೋಷಿ ಮನೆಯಲ್ಲಿ ಬಿನ್ನಮತದ ನಾಯಕರು ಸಭೆ ನಡೆಸುತ್ತಾರೆ . ಬಿಎಸ್‌ವೈ ಅವರು ದೆಹಲಿಗೆ ದೌಡಾಯಿಸುತ್ತಾರೆ. ಫೋನ್ ಕದ್ದಾಲಿಕೆಯ ಬಗ್ಗೆ ಬೆಲ್ಲದ್ ಆರೋಪಿಸುತ್ತಾರೆ. ಕಟೀಲ್ ಸಂಭಾಷಣೆಯ ಆಡಿಯೋ ಬಿಡುಗಡೆಯಾಗುತ್ತದೆ. ದಿಲ್ಲಿಯವರು ಸಿಎಂ ಆಗುತ್ತಾರೆ ಎಂದು ಕಟೀಲ್ ಹೇಳುತ್ತಾರೆ ಎಂದು ಬಿಜೆಪಿಯ ಹಲವು ಕುತೂಹಲಕಾರಿ ಬೆಳವಣಿಗೆಗಳತ್ತ ಕಾಂಗ್ರಸ್ ಬೊಟ್ಟು ಮಾಡಿದೆ.
Join the dots @BJP4Karnataka!
◆ಪ್ರಹ್ಲಾದ್ ಜೋಷಿ ಮನೆಯಲ್ಲಿ ಬಿನ್ನಮತದ ನಾಯಕರು ಸಭೆ ನಡೆಸುತ್ತಾರೆ
◆ @BSYBJP ದೆಹಲಿಗೆ ದೌಡಾಯಿಸುತ್ತಾರೆ
◆ಫೋನ್ ಕದ್ದಾಲಿಕೆಯ ಬಗ್ಗೆ ಬೆಲ್ಲದ್ ಆರೋಪಿಸುತ್ತಾರೆ
◆ಕಟೀಲ್ ಸಂಭಾಷಣೆಯ ಆಡಿಯೋ ಬಿಡುಗಡೆಯಾಗುತ್ತದೆ
◆ದಿಲ್ಲಿಯವರು ಸಿಎಂ ಆಗುತ್ತಾರೆ ಎಂದು ಕಟೀಲ್ ಹೇಳುತ್ತಾರೆ.#BJPvsBJP
— Karnataka Congress (@INCKarnataka) July 19, 2021