ಭೋಪಾಲ್: ನವದೆಹಲಿಯಲ್ಲಿ ನಡೆದ ‘ವೋಟ್ ಥೆಫ್ಟ್’ (ಮತಗಳ್ಳತನ) ರ್ಯಾಲಿಗೆ ಗೈರಾದ ಮಧ್ಯಪ್ರದೇಶ ಯುವ ಕಾಂಗ್ರೆಸ್ನ ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸದ ಪದಾಧಿಕಾರಿಗಳ ವಿರುದ್ಧ ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವದ ಸೂಚನೆಯಂತೆ ಮಧ್ಯಪ್ರದೇಶ ಘಟಕ ಈ ಕ್ರಮ ಕೈಗೊಂಡಿದೆ.

ಸಂಘಟನಾತ್ಮಕ ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಯುವ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ. ಮುಂದಿನ ಆದೇಶದವರೆಗೆ ಅಮಾನತು ಜಾರಿಯಲ್ಲಿರಲಿದೆ.
ರಾಷ್ಟ್ರೀಯ ನಾಯಕತ್ವದ ನಿರ್ದೇಶನಗಳನ್ನು ಪಾಲಿಸುವುದು ಹಾಗೂ ಸಂಘಟನೆಯಲ್ಲಿ ಶಿಸ್ತು ಕಾಪಾಡುವುದು ಈ ಕ್ರಮದ ಉದ್ದೇಶ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.














































































