ಸಚಿವರ ಪ್ರಮಾಣವಚನ ಸಮಾರಂಭ
ದೆಹಲಿ: ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಹರ್ಷವರ್ಧನ್, ರವಿಶಂಕರ್ ಪ್ರಸಾದ್, ಜಾವಡೇಕರ್ ಸಹಿತ ಹಿರಿಯ ಸಚಿವರು ಸಹಿತ ಹಲವರನ್ನ ಕೈಬಿಟ್ಟು, ಹೊಸ ಮುಖಗಳನ್ನು ಸೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 43 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಕರ್ನಾಟಕದಿಂದ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ, ಎ.ನಾರಾಯಣ ಸ್ವಾಮಿ, ರಾಜೀವ್ ಚಙದ್ರಶೇಖರ್, ಭಗವಂತ್ ಖೂಬಾ ಅವರಿಗೆ ಮಂತ್ರಿಭಾಗ್ಯ ಸಿಕ್ಕಿದೆ.
ನೂತನ ಸಚಿವರ ಪಟ್ಟಿ ಹೀಗಿದೆ:
- ನಾರಾಯಣ್ ತಟು ರಾಣೆ
- ಸರ್ಬಾನಂದ್ ಸೊನೊವಾಲ್
- ಡಾ.ವಿರೇಂದ್ರ ಕುಮಾರ್
- ಜ್ಯೋತಿರಾಧಿತ್ಯ ಎಂ.ಸಿಂಧಿಯಾ
- ರಾಮಚಂದ್ರ ಪ್ರಸಾದ್ ಸಿಂಗ್
- ಅಶ್ವಿನಿ ವೈಷ್ಣವ್
- ಪಶುಪತಿ ಕುಮಾರ್ ಪರಸ್
- ಕಿರಣ್ ರಿಜಿಜು
- ರಾಜ್ ಕುಮಾರ್ ಸಿಂಗ್
- ಹರ್ದೀಪ್ ಸಿಂಗ್ ಪುರಿ
- ಮನುಷ್ಕ್ ಮಂಡವಿಯಾ
- ಭೂಪೇಂದ್ರ ಯಾದವ್
- ಪುರುಷೋತ್ತಮ್ ರೂಪಾಲ
- ಜಿ. ಕೃಷ್ಣಾ ರೆಡ್ಡಿ
- ಅನುರಾಗ್ ಸಿಂಗ್ ಠಾಕೂರ್
- ಪಂಕಜ್ ಚೌಧರಿ
- ಅನುಪ್ರಿಯ ಸಿಂಗ್ ಪಟೇಲ್
- ಸತ್ಯ ಪಾಲ್ ಸಿಂಗ್ ಬಘೇಲ್
- ರಾಜೀವ್ ಚಂದ್ರಶೇಖರ್
- ಶೋಭಾ ಕರಂದ್ಲಾಜೆ
- ಭಾನು ಪ್ರತಾಪ್ ಸಿಂಗ್ ವರ್ಮಾ
- ದರ್ಶನ್ ವಿಕ್ರಮ್ ಜಾರ್ದೋಷ್
- ಮೀನಾಕ್ಷಿ ಲೇಖಿ
- ಅನ್ನಪೂರ್ಣ ದೇವಿ
- ಎ. ನಾರಾಯಣಸ್ವಾಮಿ
- ಕೌಶಾಲ್ ಕಿಶೋರ್
- ಅಜಯ್ ಭಟ್
- ಬಿ.ಎಲ್. ವರ್ಮಾ
- ಅಜಯ್ ಕುಮಾರ್
- ಚೌಹಾಣ್ ದೇವುಸಿನ್ಹ್
- ಭಗವಂತ್ ಖೂಬಾ
- ಕಪಿಲ್ ಮರೆಶ್ವರ್ ಪಾಟೀಲ್
- ಪ್ರತಿಮಾ ಭೌಮಿಕ್
- ಸುಭಾಷ್ ಸರ್ಕಾರ್
- ಭಗವತ್ ಕಿಶನ್ ರಾವ್ ಕರದ್
- ರಾಜ್ ಕುಮಾರ್ ರಂಜನ್ ಸಿಂಗ್
- ಭಾರತಿ ಪ್ರವೀಣ್ ಪವಾರ್
- ಬಿಶ್ವೇಶ್ವರ್ ತುಡು
- ಶಾಂತನು ಥಾಕೂರ್
- ಮುಂಜಪರ ಮಹೇಂದ್ರಭಾಯಿ
- ಜಾನ್ ಬಾರ್ಲ
- ಎಲ್. ಮುರುಗನ್
- ನಿಶಿತ್ ಪ್ರಾಮಾಣಿಕ್
ಈ ಪೈಕಿ ಕೆಲವರು ಈಗಾಗಲೇ ಸಚಿವರಾಗಿದ್ದು, ಸಂಪುಟ ದರ್ಜೆಯ ಮಂತ್ರಿಯಾಗಿ ಭಡ್ತಿ ಪಡೆದಿದ್ದಾರೆ.