ತಹಶೀಲ್ದಾರ್ ಕಚೇರಿ.. ಸಿಬ್ಬಂದಿ ಕರ್ತವ್ಯದಲ್ಲಿ ಬ್ಯುಸಿ.. ಚಾಲಾಕಿ ಕಳ್ಳ ಮಾತ್ರ ಹೀಗೆ…
ಧಾರವಾಡ : ತಹಸೀಲ್ದಾರ ಕಚೇರಿಯಲ್ಲೇ ಮೊಬೈಲ್ ಕದ್ದ ಕಳ್ಳನ ಕೃತ್ಯ ಸಿಸಿಟಿವಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಕಚೇರಿಯಲ್ಲಿ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದಾಗ ಕಳ್ಳ ಅಲ್ಲೇ ಮೇಜಿನಲ್ಲಿದ್ದ ಮೊಬೈಲ್ ಎಗರಿಸಿದ್ದಾನೆ.
ಧಾರವಾಡದ ತಹಸೀಲ್ದಾರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮ ಲೆಕ್ಕಾಧಿಕಾರಿ ರೇಖಾ ಗಾಣಿಗೇರ ಎಂಬವರು ತಮ್ಮ ಕೆಲಸದಲ್ಲಿ ಬ್ಯೂಸಿ ಇದ್ದಾಗ ಅವರ ಸೆಲ್ ಫೋನ್ ಇದ್ದಕ್ಕಿದ್ದಂತೆ ಮಾಯವಾಗಿದೆ. ಎಷ್ಟು ಹುಡುಕಾಡಿದರೂ ಸ್ಮಾರ್ಟ್ ಫೋನ್ ಸಿಗಲೇ ಇಲ್ಲ. ಅನಂತರ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಕಳ್ಳನೊಬ್ಬನ ಕೃತ್ಯ ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬ ಮುಗ್ದನಂತೆ ಬಂದು ಮೊಬೈಲ್ ಜೇಬಿಗಿಳಿಸಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.