ಮುಂಬೈ: ಕರಾವಳಿ ಬೆಡಗಿ, ತುಳುನಾಡಿನ ಕುವರಿ ‘ಕನ್ಬಡತಿ’ಗೆ ಈ ಬಾರಿಯ ‘ಮಿಸ್ ಇಂಡಿಯಾ’ ಅನ್ನಿಸಿಕೊಂಡಿದ್ದಾರೆ. 2022ನೇ ಸಾಲಿನ ಮಿಸ್ ಇಂಡಿಯಾ ಪಟ್ಟಕ್ಕೆ ಉಡುಪಿ ಮೂಲದ ಸಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಿಸ್ ಇಂಡಿಯಾ ಕಿರೀಟ ಗೆದ್ದ ಸಿನಿ ಶೆಟ್ಟಿಗೆ ಶುಭಾಶಯಗಳ ಹೂಮಳೆಯಾಗುತ್ತಿದೆ.
ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ಭಾನುವಾರ ಸಂಜೆ ಸಮಾಪನಗೊಂಡ ವರ್ಣರಂಜಿತ ಸಮಾರಂಭದಲ್ಲಿ ಸಿನಿ ಶೆಟ್ಟಿ ಅವರು ‘ಭಾರತ ಸುಂದರಿ’ ಕಿರೀಟ ಗೆದ್ದರು. ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಈ ಕರಾವಳಿ ಚೆಲುವೆ ಈ ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡರು.
ಈ ಹಿಂದೆ ಅಂದರೆ, 2020ರ ಭಾರತ ಸುಂದರಿ ತೆಲಂಗಾಣದ ಮಾನಸಾ ವಾರಣಾಸಿ ಅವರ ನಂತರ ಇದೀಗ ಆ ಪಟ್ಟ ಸಿನಿ ಶೆಟ್ಟಿಗೆ ಒಲಿದಿದೆ. ಮಾನಸಾ ಅವರು ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ 2022 ಕಿರೀಟವನ್ನು ತೊಡಿಸಿದಾಗ ಜೈಕಾರ ಮೊಳಗಿತು.
ಯಾರು ಈ ಸಿನಿ ಶೆಟ್ಟಿ..?
ಸಿನಿ ಶೆಟ್ಟಿ ಕರಾವಳಿ ಮೂಲದ ಚೆಲುವೆ. ಉಡುಪಿ ಜಿಲ್ಲೆ ಇನ್ನಂಜೆ ಮೂಲದವರಾದ ಸಿನಿ ಶೆಟ್ಟಿ ಚಾರ್ಟರ್ಡ್ ಅಕೌಂಟೆಂಟ್ ಆಗುವ ಹಾದಿಯಲ್ಲಿದ್ದಾರೆ. ಅದಾಗಲೇ ಇವರು ‘ಮಿಸ್ ಇಂಡಿಯಾ’ ಎನ್ನಿಸಿಕೊಂಡಿದ್ದಾರೆ.
ಕರಾವಳಿ ಕುಟುಂಬದ ಕುವರಿ ಸಿನಿ ಶೆಟ್ಟಿ ಅವರು ಜನಿಸಿದ್ದು ಮುಂಬೈನಲ್ಲಿ. ಈ ಬಾರಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರಿವುದರಿಂದಾಗಿ ಸಿನಿ ಶೆಟ್ಟಿ ಭಾರೀ ಸುದ್ದಿಯಾಗಿದ್ದಾರೆ.
ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್ಎ) ವ್ಯಾಸಂಗ ಮಾಡುತ್ತಿರುವ ಸಿನಿ ಶೆಟ್ಟಿ ಈ ವರ್ಷದ ಮಿಸ್ ಇಂಡಿಯಾ. ಈ ಬಾರಿ ನಡೆಯಲಿರುವ ಪ್ರತಿಷ್ಠಿತ 71ನೇ ‘ಮಿಸ್ ವರ್ಲ್ಡ್’ ಸ್ಪರ್ದೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಇವರಿಗೆ ಲಭಿಸಿದೆ.
ಈ ನಡುವೆ, ಮಿಸ್ ಇಂಡಿಯಾ ಸಿನಿಶೆಟ್ಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಅಭಿಮಾನಕ್ಕೆ ಸಿನಿ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.
Thanks for all your lovely wishes 🥺🙏🏼
I hope I made Karnataka proud. Can’t wait to start this new journey and make India proud 🇮🇳🤞🏼
Keep showering all your love and blessings and I love y’all ❤️#SiniShetty #MissIndiaFinale2022 #MissIndia2022 #FeminaMissIndia2022 #MissIndia pic.twitter.com/x3oRvXdBa0— Sini Shetty (@sini_shetty) July 4, 2022




















































