ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ ಬೆಂಬಲಿಗರು ನಡೆಸಲುದ್ದೇಶಿಸಿರುವ ‘ಸಿದ್ದರಾಮೋತ್ಸವ ಶಕ್ತಿಪ್ರದರ್ಶನ’ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದದ ಪಿತೂರಿಯೇ? ಈ ಕುರಿತು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ವಿಪಕ್ಷ ನಾಯಕ ಸಿದ್ದರಾಮಯ್ಯರ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿರುವುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು ಡಮ್ಮಿ ಡಿಕೆಶಿ ಆಗಿದ್ದೇಕೆ? ಎಂದೂ ಕಮಲ ಪಕ್ಷ ಟೀಕಾಸ್ತ್ರ ಪ್ರಯೋಗಿಸಿದೆ.
ವಿಪಕ್ಷ ನಾಯಕ @siddaramaiah ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿರುವುದು @DKShivakumar ಅವರಿಗೆ ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು?
ಪಕ್ಷದ ಅಧ್ಯಕ್ಷರಿಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು #ಡಮ್ಮಿಡಿಕೆಶಿ ಆಗಿದ್ದೇಕೆ?
— BJP Karnataka (@BJP4Karnataka) July 3, 2022
ಇತ್ತೀಚಿಗೆ ರಾಜಸ್ಥಾನದಲ್ಲಿ ಡಿಕೆಶಿ ಭಾಗವಹಿಸಿದ ಚಿಂತನ ಶಿಬಿರದಲ್ಲೂ, ಮೊನ್ನೆ ದೆಹಲಿಯಲ್ಲಿ ನಕಲಿ ಗಾಂಧಿಗಳ ಭೇಟಿ ಮಾಡಿದಾಗಲೂ, ಸಿದ್ದರಾಮಾತ್ಸವದ ಬಗ್ಗೆ ಯಾರೂ ಹೇಳಲಿಲ್ಲವೇ? ನಿಮ್ಮಿಬ್ಬರ ನಡುವೆ ಈಗ ಜೋಡೋ ಆಟವೋ ಅಥವಾ ತೋಡೋ ಆಟವೋ? ಡಿಕೆಶಿ ಅವರೇ, ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಮಾತು ಮೀರಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದಾದರೆ, ನಿಮ್ಮ ಸಂದೇಶ ತಲುಪುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಇಲ್ಲ ಎಂದರ್ಥವಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗೈದಿರುವ ಬಿಜೆಪಿ, ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವುದೇ ಈಗ ಯಕ್ಷ ಪ್ರಶ್ನೆ. ನನ್ನ ಉತ್ಸವಕ್ಕೆ ರಾಹುಲ್ ಬರುತ್ತಾರೆ ಎನ್ನುವ ಸಿದ್ದರಾಮಯ್ಯ, ರಾಹುಲ್ ಬರುವ ವಿಷಯವೇ ಗೊತ್ತಿಲ್ಲ ಎನ್ನುತ್ತಿರುವ ಡಿಕೆಶಿ. ಡಿಕೆಶಿಗೆ ಮಾಹಿತಿ ಇಲ್ಲದೆ ರಾಹುಲ್ ಬರುತ್ತಾರೆಯೇ? ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಸುಳಿವೇ ಇದು? ಎಂಬ ಅನುಮಾನವನ್ನೂ ವ್ಯಕ್ತಪಡಿಸಿದೆ.
ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವುದೇ ಈಗ ಯಕ್ಷ ಪ್ರಶ್ನೆ.
ನನ್ನ ಉತ್ಸವಕ್ಕೆ ರಾಹುಲ್ ಬರುತ್ತಾರೆ ಎನ್ನುವ ಸಿದ್ದರಾಮಯ್ಯ, ರಾಹುಲ್ ಬರುವ ವಿಷಯವೇ ಗೊತ್ತಿಲ್ಲ ಎನ್ನುತ್ತಿರುವ ಡಿಕೆಶಿ.
ಡಿಕೆಶಿಗೆ ಮಾಹಿತಿ ಇಲ್ಲದೆ ರಾಹುಲ್ ಬರುತ್ತಾರೆಯೇ?
ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಸುಳಿವೇ ಇದು?#ಡಮ್ಮಿಡಿಕೆಶಿ pic.twitter.com/tWplLrNlma
— BJP Karnataka (@BJP4Karnataka) July 3, 2022





































































