ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ವಸತಿ ಸಚಿವ ವಿ.ಸೋಮಣ್ಣ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ. ಸಚಿವರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ತಾಪಕವಾಗಿ ವೈರಲ್ ಆಗಿದ್ದು ಸಚಿವರ ವಿರುದ್ದ ಸಾರ್ವಜನಿಕರು ಕಿಡಿ ಕಾರಿದ್ದಾರೆ.
The sanskari @BJP4Karnataka minister Somanna assault’s a lady who had come to seek helppic.twitter.com/fFn1gRWQs7
— Arjun (@arjundsage1) October 23, 2022
ಈ ಬಗ್ಗೆ ಸಚಿವರ ಕಡೆಯಿಂದ ಸ್ಪಷ್ಟನೆ ಸಿಕ್ಜಿದೆ. ಮಹಿಳೆ ಕಾಲಿಗೆ ಬೀಳಲು ಮುಂದಾದಾಗ ತೆಡೆಯುವ ಸಂದರ್ಭದಲ್ಲಿ ಕೈ ಆ ಮಹಿಳೆಯ ಕೆನ್ನೆಗೆ ತಗುಲಿದೆ. ಉದ್ದೇಶಪೂರ್ವಕವಾಗಿ ಸಚಿವರು ಕಪಾಳಮೋಕ್ಷ ಮಾಡಿಲ್ಲ ಎಂದು ಆಪ್ತರು ಹೇಳಿಕೊಂಡಿದ್ದಾರೆ. ಆದರೆ ವೀಡಿಯೋದಲ್ಲಿ ಕಪಾಳಮೋಕ್ಷ ನಡೆದಿರುವುದು ಗೊತ್ತಾಗುತ್ತಿದೆ ಎಂದು ಸಾರ್ವಜನಿಕರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಮಹಿಳೆ ಮೇಲೆ ಹಲ್ಲೆ ಮಾಡಿರುವ ಸಚಿವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸಿದ್ದಾರೆ.




































































