ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ಅಕ್ರಮಗಳನ್ನು ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅನೇಕ ಕಡೆ ನಾಗ-ನಾಣ್ಯ ಜಪ್ತಿಯ ಪ್ರಕರಣಗಳು ನಡೆದಿವೆ.
ರಾಜ್ಯದ ಎಲ್ಲಾ ಚೆಕ್ ಪೋಸ್ಟ್’ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದ್ದು ದಾಖಲೆಗಳಿಲ್ಲದೆ ಸಾಗಿಸುವ ವಸ್ತುಗಳನ್ನು ಹಾಗೂ ಭಾರೀ ಮೊತ್ತದ ಹಣವನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ಸರಕು ಸಾಗಣೆ ಮಾಡುವವರು ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ಹೊಂದಿರಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ. ಮಂಗಳವಾರ ಸೂಚನೆ ನೀಡಿದೆ.
ಸರುಕುಗಳನ್ನೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುವವರು ಜಿಎಸ್’ಟಿ ಸಹಿತ ದಾಖಲೆಗಳನ್ನು ಹೊಂದಿರಬೇಕು. ತಪಾಸಣೆಯ ಸಂದರ್ಭದಲ್ಲಿ ದಾಖಲೆಗಳನ್ನು ತೋರಿಸಬೇಕು ಎಂದು ಅಧಿಕಾರಿಗಳು ಸಲಹೆ ಮಾಡಿದ್ದಾರೆ.