ಬೆಂಗಳೂರು: ಕೊರೋನಾ ಲಸಿಕೆಯ ಎರಡನೇ ದಿನದ ಆಭಿಯಾನ ಭಾನುವಾರವೂ ನಡೆಯಿತು. ಕೋವಿಡ್ ಲಸಿಕೆ ವಿತರಣೆ ರಾಜ್ಯಾದ್ಯಂತ ಚಾಲನೆ ಪಡೆದುಕೊಂಡಿದ್ದು ಭಾನುವಾರ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಮುಂದುವರಿದಿದೆ.
ಬೆಂಗಳೂರಿನ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಒಂದೇ ದಿನ ನಾಲ್ಕು ಸಾವಿರ ಮಂದಿಗೆ ವ್ಯಾಕ್ಸಿನ್ ವಿತರಿಸುವ ಕಾರ್ಯ ಎರಡು ಸೆಷನ್ ಗಳಲ್ಲಿ ನಡೆಯಿತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್ ಉಪಸ್ಥಿತರಿದ್ದರು.