ಮಂಗಳೂರು: ಕರಾವಳಿಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಜಾತ್ರಾ ಮಹೋತ್ಸವಗಳಿಗೂ ಚಾಲನೆ ಸಿಗುತ್ತದೆ. ಹಾಗಾಗಿ ಈಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೀಗ ಜಾತ್ರೆಗಳ ಸುಗ್ಗಿ.
ಇದೇ ಸಂದರ್ಭದಲ್ಲಿ ಮಂಗಳೂರಿನ ಮಹಾಮಾಯ ದೇವರ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮಾಗಮಕ್ಕೆ ಸಾಕ್ಷಿಯಾಯಿತು. ಇತಿಹಾಸ ಪ್ರಸಿದ್ಧ ಮಾಮಗಳೂರು ರಥಬೀದಿಯಲ್ಲಿರುವ ಸುಮಾರು 509 ವರ್ಷಗಳ ಪುರಾತನ ಶ್ರೀ ಕುಡ್ತೆರಿ ಮಹಾಮಾಯ ದೇವರ ಬ್ರಹ್ಮ ರಥೋತ್ಸವ ಗುರುವಾರದಂದು ವೈಭವದಿಂದ ನೆರವೇರಿತು. ಜರಗಿತು.
ಭಾರೀ ಜನಸ್ತೋಮದ ನಡುವೆ ಬ್ರಹ್ಮರಥ ಸಾಗಿದ ದೃಶ್ಯ ಅನನ್ಯ ವೈಭವದ ಸನ್ಬಿವೇಶಕ್ಕೆ ಸಾಕ್ಷಿಯಾಯಿತು. ಈ ಸೊಗಸು ಸೊಭಗಿನ ಸನ್ನಿವೇಶದ ನಡುವೆ ದೇವರ ಕುರಿತ ಜಯಘೋಷ ಗಮನ ಸೆಳೆಯುತ್ತಿತ್ತು.