ಮಂಗಳೂರು: ವಿಶೇಷ ಕೈಂಕರ್ಯ, ಅನನ್ಯ ಮಹೋತ್ಸವಗಳಿಗೆ ಸಾಕ್ಷಿಯಾಗುತ್ತಿರುವ ಮಂಗಳೂರಿನ ಕಾರ್‌ಸ್ಟೀಟ್ ಶ್ರೀ ವೆಂಕಟರಮಣ ದೇಗುಲ ಇದೀಗ ಮತ್ತೆ ಆಸ್ತಿಕ ಸಮುದಾಯದ ಚಿತ್ತ ಸೆಳೆದಿದೆ.
‘ಮಂಗಳೂರು ರಥೋತ್ಸವ’ ಖ್ಯಾತಿಯ ಇತಿಹಾಸ ಪ್ರಸಿದ್ಧ ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಶನಿವಾರ ವೈಭವದಿಂದ ನೆರವೇರಿತು. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿವಿಧ ಕೈಂಕರ್ಯ ಸಾಗಿತು.
ವೈಭವದ ರಥೋತ್ಸವ ನೋಡಲು ಭಕ್ತಸಾಗರವೇ ನೆರೆದಿತ್ತು. ದೇಶ ವಿದೇಶಗಳಿಂದ ಆಗಮಿಸಿದ್ದ ಭಗವತ್ ಭಕ್ತರ ಸಮ್ಮುಖದಲ್ಲಿ ಈ ಮಹಾವೈಭವ ವಿಜೃಂಭಣೆಯಿಂದ ಜರುಗಿತು.
ಈ ನಡುವೆ ಕರಾವಳಿಯ ಖ್ಯಾತ ಛಾಯಾಗ್ರಹಕ, ಪತ್ರಕರ್ತ ಮಂಜು ನೀರೇಶ್ವಾಲ್ಯ ಅವರು ‘ಮಂಗಳೂರು ರಥೋತ್ಸವ’ ವೈಭವ ಬಗ್ಗೆ ತೆಗೆದ ಫೊಟೋ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಮಂಗಳೂರಿನ ಹೃದಯಭಾಗದಲ್ಲಿ ಜಮಾಯಿದ್ದ ಜನಸಾಗರದ ನಡುವೆ ರಾರಾಜಿಸುತ್ತಿದ್ದ ಬ್ರಹ್ಮರಥವನ್ನು ಕೇಂದ್ರೀಕರಿಸಿ ಮಂಜು ನೀರೇಶ್ವಾಲ್ಯ ಅವರು ತೆಗೆದ ‘360 ಡಿಗ್ರಿ ಫೊಟೋ’ ವಿಶಿಷ್ಟತೆಯಿಂದ ಎಲ್ಲರ ಚಿತ್ತ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೊಟೋಗಳು ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.