📝 ರಾಘವೇಂದ್ರ ಗಂಜಾಮ್
ಮಂಡ್ಯ :ಕೆ.ಆರ್.ಪೇಟೆ ತಾಲೂಕಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ಕಿಕ್ಕೇರಿ
ಕೆರೆ ಹಲವು ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಬಿದಿದ್ದೆ.ಕೆರೆಯಿಂದ ಹೆಚ್ಚಿನ ನೀರು ಹರಿ ದು ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತ ವಾದ್ರೆ,ರೈತರ ಜಮೀನುಗಳು ಮುಳುಗಡೆಯಾ ಗಿದ್ದು,ರೈತರು ಮತ್ತು ಸುತ್ತಮುತ್ತಲ ಜನರಲ್ಲಿ ಆತಂಕ ಮೂಡಿಸಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ
ತಾಲೂಕಿನಾದ್ಯದ್ಯಂತ ಶುಕ್ರವಾರ ರಾತ್ರಿ ಭಾರೀ ಮಳೆಯಾಗಿದೆ. ಇದ್ರಿಂದಾಗಿ ತಾಲೂಕಿನ ಕಿಕ್ಕೇರಿ ಕೆರೆ ಹಲವು ವರ್ಷಗಳ ಬಳಿಕ ಭರ್ತಿಯಾಗಿದ್ದು ಕೆರೆ ಕೋಡಿ ಬಿದ್ದು ಹೆಚ್ಚಿನ ಪ್ರಮಾಣದ ನೀರು ಹೊರಕ್ಕೆ ಬಂದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಿಕ್ಕೇರಿಯಿಂದ ಮಾದಿಹಳ್ಳಿ ಹಾಗೂ ದೇವರಹಳ್ಳಿ ಗ್ರಾಮಗಳ ಸಂಪ ರ್ಕದ ರಸ್ತೆಗಳ ಹಳ್ಳಗಳಲ್ಲಿ ಭಾರೀ ಪ್ರಮಾಣದ ನೀರು ಹರಿದಿದ್ದು ಅಲ್ಲಲ್ಲಿ ಚಿಕ್ಕಸೇತುವೆಗಳು ಕುಸಿದಿದ್ದು, ಜಮೀನಿಗೂ ಕೂಡ ನೀರು ತುಂಬಿಕೊಂಡು, ಬಾಳೆ, ತೆಂಗು, ಕಬ್ಬು ಬೆಳೆಗಳು ಜಲಾವೃತವಾಗಿ ರೈತರು ಬೆಳೆ ನಾಶವಾಗುವ ಆತಂಕದಲ್ಲಿದ್ದಾರೆ.
ಇನ್ನು ನೀರಿನಿಂದ ಜಲಾವೃತವಾಗಿರೋ ಈ ಭಾ ಗದ ಈ ರಸ್ತೆಯಲ್ಲಿ ದಿನ ನಿತ್ಯ ಶಾಲಾ ಮಕ್ಕಳು, ಶಾಲಾ ವಾಹನಗಳು ಓಡಾಡುತ್ತಿರುವ ಸೇತುವೆ ಕುಸಿತ ಆಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು, ಕೆರೆವೆಡೆ ಹಳ್ಳ ದ ನೀರು ಕೊರಕಲು ಸೃಷ್ಟಿ ಮಾಡಿದ್ದು ರಸ್ತೆ ಕೂಡ ಕುಸಿಯುವ ಸ್ಥಿತಿಗೆ ತಲುಪಿವೆ.ಈಗಲಾದ್ರು ಸಂಬಂ ಧಪಟ್ಟ ಅಧಿಕಾರಿ ಗಳು ಕೂಡಲೇ ಶಿಥಿಲವಾಗಿರೋ ಸೇತುವೆಗಳನ್ನು ಹಾಗೂ ಕುಸಿಯುತ್ತಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ವೇಳೆ ಕೆಲವೆಡೆ ರೈತರಲ್ಲಿ ಸಂತಸ ತಂದಿದ್ದರೂ, ಕೆರೆಭಾಗದ ರೈತರು ಸೇರಿದಂತೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ರೈತರು ಬೆಳೆ ನಾಶವಾಗುವ ಸಂಕಷ್ಟ ಎದುರಿಸುತ್ತಿದ್ದಾರೆ. ಸಾರ್ವಜನಿಕರು ಸಂಚಾರಕ್ಕೆ ಸಂಚಾರ ಕ್ಕೆ ರಸ್ತೆ ಮಾರ್ಗವಿಲ್ಲದೆ ಪರೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.